ಭಾರತದಲ್ಲಿ ಮಾನಸಿಕ ಸಮಸ್ಯೆ ಇದೆ, ಇಲ್ಲಿ ಸೈಬರ್ ಸುರಕ್ಷತೆ ಎಂಬುದು ಇಲ್ಲವೇ ಇಲ್ಲ: ಸೋನು ನಿಗಮ್ 

Update: 2020-09-28 09:28 GMT

ಹೊಸದಿಲ್ಲಿ: ತಮ್ಮ ಹೆಸರಿನಲ್ಲಿ ಸೃಷ್ಟಿಸಲಾಗಿರುವ ನಕಲಿ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದ ನಟಿ ದೀಪಿಕಾ ಪಡುಕೋಣೆಯ ತಿರುಚಲ್ಪಟ್ಟ ಚಿತ್ರವನ್ನು ರಿಟ್ವೀಟ್ ಮಾಡಿದ ಕಾರ್ಮಿಕ ಸಚಿವಾಲಯದ ವಿರುದ್ಧ ಗಾಯಕ ಸೋನು ನಿಗಮ್ ಕಿಡಿ ಕಾರಿದ್ದಾರೆ.

ಈ ಕುರಿತು ತಮ್ಮ ಇನ್‍ಸ್ಟಾಗ್ರಾಂನಲ್ಲಿ ವೀಡಿಯೋ ಪೋಸ್ಟ್ ಮಾಡಿ ಸೋನು ನಿಗಮ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಮಾನಸಿಕ ಸಮಸ್ಯೆ ಇದೆ, ಇಲ್ಲಿ ಸೈಬರ್ ಸುರಕ್ಷತೆ ಎಂಬುದು ಇಲ್ಲವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರ ಜತೆಗೆ ಅವರು #ಸೋನುಲೈವ್‍ಡಿ ವ್ಲಾಗ್ 76 ಮಿನಿಸ್ಟ್ರಿ ಆಫ್ ಲೇಬರ್ ಆಫ್ ಇಂಡಿಯಾ, ಐ ಆಮ್ ನಾಟ್ ಆನ್ ಟ್ವಿಟರ್,'' ಎಂದೂ ಬರೆದಿದ್ದಾರೆ.

ಕಾರ್ಮಿಕ ಸಚಿವಾಲಯ ತಾನು ರಿಟ್ವೀಟ್ ಮಾಡಿರುವುದನ್ನು ಡಿಲೀಟ್ ಮಾಡಿದ್ದರೂ ಆ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತಾನು  ಮೂರೂವರೆ ವರ್ಷಗಳಿಂದ ಟ್ವಿಟರ್ ನಲ್ಲಿಲ್ಲ ಎಂದು ಸ್ಪಷ್ಟಪಡಿಸಿದ ಸೋನು ನಿಗಮ್ ತಾವು ತಮ್ಮ ಹೆಸರಿನ ನಕಲಿ ಖಾತೆಗಳ ಕುರಿತಂತೆ ಈ ಹಿಂದೆಯೇ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾಗಿಯೂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News