ಹೆಚ್ಚಲಿದೆ ರೈಲು ಪ್ರಯಾಣ ದರ !

Update: 2020-09-28 15:36 GMT

ಹೊಸದಿಲ್ಲಿ, ಸೆ. 28: ಮೋದಿ ನೇತೃತ್ವದ ಕೇಂದ್ರ ಸರಕಾರ ಬಳಕೆದಾರದ ಅಭಿವೃದ್ಧಿ ಶುಲ್ಕ (ಯೂಸರ್ ಡೆವಲಪ್‌ಮೆಂಟ್ ಫೀಸ್-ಯುಡಿಎಫ್) ಜಾರಿಗೆ ತರುವ ನಿರೀಕ್ಷೆ ಇರುವುದರಿಂದ ಇನ್ನು ಮುಂದೆ ರೈಲು ಪ್ರಯಾಣ ದುಬಾರಿಯಾಗಲಿದೆ. ಪ್ರಯಾಣಿಕರ ಮೇಲೆ ವಿಧಿಸಲಾಗುವ ‘ಬಳಕೆದಾರರ ಅಭಿವೃದ್ಧಿ ಶುಲ್ಕ’ ಮುಂದಿನ ತಿಂಗಳು ನಡೆಯಲಿರುವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಿವೆ.

ಇದರಿಂದ ರೈಲು ಪ್ರಯಾಣದ ಸ್ಲೀಪರ್ ಟಿಕೆಟ್ 10 ರೂಪಾಯಿ ಹಾಗೂ ಎಸಿ ಟಿಕೆಟ್ 35 ರೂಪಾಯಿ ದುಬಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಈ ‘ಬಳಕೆದಾರರ ಅಭಿವೃದ್ಧಿ ಶುಲ್ಕ’ ರೈಲಿನ ಶ್ರೇಣಿ/ವರ್ಗಕ್ಕೆ ಭಿನ್ನವಾಗಿ ಇರಲಿದೆ. 5 ವಿಭಿನ್ನ ಶ್ರೇಣಿಯಲ್ಲಿ ಇರಲಿದೆ. ಎಸಿ ಪ್ರಯಾಣಿಕರು ಅತ್ಯಧಿಕ ಶುಲ್ಕ ಹಾಗೂ ಸ್ಲೀಪರ್ ಕ್ಲಾಸ್ ಪ್ರಯಾಣಿಕರು ಅತಿ ಕಡಿಮೆ ಶುಲ್ಕ ಪಾವತಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News