ಹಿರಿಯ ಕವಿ ಚನ್ನವೀರ ಕಣವಿಗೆ ಕಲಬುರಗಿ ಕೇಂದ್ರೀಯ ವಿವಿಯಿಂದ ಡಾಕ್ಟರೇಟ್

Update: 2020-09-28 16:37 GMT

ಧಾರವಾಡ, ಸೆ.28: ಹಿರಿಯ ಕವಿ ನಾಡೋಜ ಚನ್ನವೀರ ಕಣವಿಯವರಿಗೆ ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪ್ರಧಾನ ಮಾಡಲಾಗಿದೆ.

ಡಾಕ್ಟರೇಟ್ ಗೌರವವನ್ನು ಪಡೆದ ಚನ್ನವೀರ ಕಣವಿ ಅವರು ಕನ್ನಡದ ಜನತೆಗೆ ಅರ್ಪಣೆ ಮಾಡಿದ್ದಾರೆ. ಕಲಬುರಗಿ ಕೇಂದ್ರೀಯ ವಿವಿ ಕುಲಪತಿ ಪ್ರೊ.ಎಚ್.ಎಂ.ಮಹೇಶ್ವರಯ್ಯರಿಂದ ಧಾರವಾಡದ ಕಲ್ಯಾಣ ನಗರದ ಕಣವಿಯವರ ಮನೆಯಲ್ಲಿ ಡಾಕ್ಟರೇಟ್ ಪ್ರಧಾನ ಮಾಡಲಾಗಿದೆ.

ಗದಗ ಜಿಲ್ಲೆಯ ಹೊಂಬಳ ಗ್ರಾಮದವರಾದ ಚನ್ನವೀರ ಕಣವಿ ಅವರು ಕವಿ, ಅಧ್ಯಾಪಕರು, ಧಾರವಾಡ ವಿವಿಯಲ್ಲಿ ಪ್ರಾಧ್ಯಾಪಕರು, ಪ್ರಸಾರಂಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದವರು. ಇವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಪುರಸ್ಕಾರಗಳು ದೊರಕಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News