ಸಂಪ್‍ಗಳಿಗೆ ಅಳವಡಿಸಿದ್ದ ವಾಟರ್ ಮೋಟಾರ್ ಕಳ್ಳತನ ಆರೋಪ: ವ್ಯಕ್ತಿ ಬಂಧನ

Update: 2020-09-28 16:54 GMT

ಮೈಸೂರು,ಸೆ.28: ಮನೆಯ ಮುಂದೆ ಸಂಪ್‍ಗಳಿಗೆ ಅಳವಡಿಸಿದ್ದ ವಾಟರ್ ಮೋಟಾರುಗಳನ್ನು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಮೈಸೂರು ನಗರದ ಆಲನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮೈಸೂರಿನ ಶಾಂತಿನಗರ ನಿವಾಸಿ ಮುಹಮ್ಮದ್ ಸಲೀಂ (29) ಎಂದು ಗುರುತಿಸಲಾಗಿದೆ. ಈತನಿಂದ ಸುಮಾರು 50,000 ರೂ. ಬೆಲೆ ಬಾಳುವ 11 ವಾಟರ್ ಮೋಟಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪತ್ತೆ ಕಾರ್ಯದಿಂದ ಆಲನಹಳ್ಳಿ ಪೊಲೀಸ್ ಠಾಣೆಯ 4 ಪ್ರಕರಣಗಳು ಮತ್ತು ನಜರ್ ಬಾದ್ ಪೊಲೀಸ್ ಠಾಣೆಯ 1 ಪ್ರಕರಣ ಪತ್ತೆಯಾಗಿವೆ.

ಡಿಸಿಪಿ ಗೀತಾ ಪ್ರಸನ್ನ ಮಾಗದರ್ಶನದಲ್ಲಿ ದೇವರಾಜ ವಿಭಾಗದ ಎಸಿಪಿ ಎಂ.ಎನ್ ಶಶಿಧರ್ ಅವರ ನೇತೃತ್ವದಲ್ಲಿ ಆಲನಹಳ್ಳಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹೆಚ್.ಹರಿಯಪ್ಪ, ಪಿಎಸ್ಐ ಮಹೇಂದ್ರ ಟಿ.ಎಸ್, ಎಎಸ್ಐ ಶ್ರೀಧರ ಹೆಚ್.ಕೆ, ಸಿಬ್ಬಂದಿಗಳಾದ ಶ್ರೀಧರ.ಟಿ.ಸಿ, ಶಿವಪ್ರಸಾದ್.ಜಿ ಪತ್ತೆ ಕಾರ್ಯದಲ್ಲಿ  ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News