`ಕಾಡುಗೊಲ್ಲ ಅಭಿವೃದ್ಧಿ ನಿಗಮ' ಸ್ಥಾಪಿಸಲು ಆಗ್ರಹ

Update: 2020-09-28 18:41 GMT

ಬೆಂಗಳೂರು, ಸೆ. 28: `ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನಿನ್ನೆ ಘೋಷಣೆ ಮಾಡಿ, ಇಂದು `ಗೊಲ್ಲ ಅಭಿವೃದ್ಧಿ ನಿಗಮ' ಸ್ಥಾಪಿಸಲು ಆದೇಶಿಸಿರುವುದು ನಿಜಕ್ಕೂ ವಿಪರ್ಯಾಸವೇ ಸರಿ. ನಿನ್ನೆ ಘೋಷಿಸಿದಂತೆ `ಕಾಡುಗೊಲ್ಲ ಅಭಿವೃದ್ಧಿ ನಿಗಮ'ವನ್ನು ಸ್ಥಾಪಿಸಬೇಕು' ಎಂದು ಕೆಪಿಸಿಸಿ ಸದಸ್ಯ ಹಾಗೂ ಕಾಡುಗೊಲ್ಲ ಸಮುದಾಯದ ಮುಖಂಡ ದೊಡ್ಡನಾಗಯ್ಯ ಆಗ್ರಹಿಸಿದ್ದಾರೆ.

ತುಳಿತಕ್ಕೆ ಒಳಗಾಗಿರುವ ಸಮುದಾಯಗಳ ಅಭಿವೃದ್ಧಿಗೆ ಅನೇಕ ಕ್ರಮಗಳನ್ನು ಕೈಗೊಂಡಿರುವುದನ್ನು ನಾವು ಮನಗಂಡಿದ್ದೇವೆ. ಕಾಡುಗೊಲ್ಲ ಸಮುದಾಯವು ಆರ್ಥಿಕ, ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿಯೂ ಬಹಳ ಹಿಂದುಳಿದಿದ್ದು, ಈ ಸಮುದಾಯ ಸಮಾಜದ ಮುಂಚೂಣಿಗೆ ತರಬೇಕಾರೂ ಪ್ರತ್ಯೇಕ ನಿಗಮ ಸ್ಥಾಪಿಸಿ, ಹೆಚ್ಚಿನ ಅನುದಾನ ನೀಡಬೇಕು ಎಂದು ದೊಡ್ಡನಾಗಯ್ಯ ಒತ್ತಾಯಿಸಿದ್ದಾರೆ.

ಎಸ್ಟಿಗೆ ಶಿಫಾರಸ್ಸು ಮಾಡಿ: ರಾಜ್ಯದಲ್ಲಿರುವ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಸೇರ್ಪಡೆ ಮಾಡುವ ಸಂಬಂಧ ಈ ಹಿಂದೆ ತಾವು ಸಿಎಂ ಆಗಿದ್ದ ವೇಳೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಬದ್ಧತೆ ಮರೆದಿದ್ದೀರಿ. ಇದೀಗ ಈ ವಿಚಾರವೂ ಕೇಂದ್ರ ಸರಕಾರದ ಮುಂದಿದ್ದು ಕಾಡುಗೊಲ್ಲ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಮಾಡಲು ಪ್ರಧಾನಿ ಮೋದಿಗೆ ಮನವರಿಕೆ ಮಾಡಿಕೊಡಬೇಕು. ಆ ಮೂಲಕ ಸಮುದಾಯದ ಅಭಿವೃದ್ದಿಗೆ ನೆರವಾಗಬೇಕು ಎಂದು ದೊಡ್ಡನಾಗಯ್ಯ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News