ಮುಸ್ಲಿಮರು ಶೈಕ್ಷಣಿಕ ಗುರಿ ನಿಗದಿಪಡಿಸಿಕೊಳ್ಳಿ ಎಂದು ಕರೆ ನೀಡಿದ ಹಿಮಾಲಯ ಡ್ರಗ್ ಮುಖ್ಯಸ್ಥ: ವಾಸ್ತವ ಏನು ಗೊತ್ತೇ ?

Update: 2020-09-29 07:18 GMT

ಹೈದರಾಬಾದ್ : ಮುಸ್ಲಿಮರು ಎಲ್ಲ ವೃತ್ತಿಗಳಲ್ಲಿ ಸೇರಲು ಶಕ್ತರಾಗುವಂತೆ ಹಾಗೂ ಇತರ ಸಮುದಾಯಗಳು ಅವರನ್ನು ಅವಲಂಬಿಸುವಂತೆ ಶೈಕ್ಷಣಿಕ ಗುರಿಯನ್ನು ಸಮುದಾಯದವರು ನಿಗದಿಪಡಿಸಿಕೊಳ್ಳಬೇಕು ಎಂದು ಹಿಮಾಲಯ ಡ್ರಗ್ ಕಂಪನಿಯ ಮಾಲಕ ಎನ್ನಲಾದ ವ್ಯಕ್ತಿಯೊಬ್ಬರು ಕರೆ ನೀಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆದರೆ ವಾಸ್ತವವಾಗಿ ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿ ಹಿಮಾಲಯ ಡ್ರಗ್ ಕಂಪನಿಯ ಮಾಲಕರಲ್ಲ ಎನ್ನುವುದು ನ್ಯೂಸ್ ‌ಮೀಟರ್ ನಡೆಸಿದ ಫ್ಯಾಕ್ಟ್‌ಚೆಕ್‌ನಿಂದ ತಿಳಿದುಬಂದಿದೆ.

ಹಿಮಾಲಯ ಗ್ಲೋಬಲ್ ಹೋಲ್ಡಿಂಗ್ಸ್‌ನ ಸಂಸ್ಥಾಪಕ ಮುಹಮ್ಮದ್ ಮನಾಲ್. ಅವರು ಈ ಕಂಪನಿಯನ್ನು ಮಗ ಮಿರಾಜ್ ಮನಾಲ್ ಅವರಿಗೆ ವರ್ಗಾಯಿಸಿದ್ದಾರೆ. ಪ್ರಸ್ತುತ ಅವರ ಮಗ ನಬೀಲ್ ಮನಾಲ್ ಹಿಮಾಲಯ ಡ್ರಗ್ ಕಂಪನಿ ಮತ್ತು ಹಿಮಾಲಯ ಹರ್ಬಲ್ ಹೆಲ್ತ್ ಕೇರ್‌ನ ವಹಿವಾಟು ನೋಡಿಕೊಳ್ಳುತ್ತಿದ್ದಾರೆ.

ಗೂಗಲ್ ಹಾಗೂ ಯೆಂಡೆಕ್ಸ್‌ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಯೂಟ್ಯೂಬ್ ಚಾನೆಲ್‌ನಲ್ಲಿ ಕೆಲ ವೈರಲ್ ವೀಡಿಯೊಗಳು ಕಂಡು ಬಂದಿವೆ. ಒಂದು ವೀಡಿಯೊ ಶೀರ್ಷಿಕೆಯ ಪ್ರಕಾರ ವೈರಲ್ ವೀಡಿಯೊದಲ್ಲಿರುವ ಈ ವ್ಯಕ್ತಿಯ ಹೆಸರು ನಕ್ವಿ ಅಹ್ಮದ್ ನದ್ವಿ. ಬಯಾತ್.ಕಾಮ್ ಪ್ರಕಾರ, ಇವರು ಸೌದಿ ಅರೇಬಿಯಾದ ಗಣಿಗಾರಿಕೆ ಕಂಪನಿಯಾದ ಮಾಡೆನ್‌ನ ಸಿಇಒ. ಆದರೆ ವೈರಲ್ ವೀಡಿಯೊದಲ್ಲಿರುವ ವ್ಯಕ್ತಿ ಇವರೇ ಎಂದು ನಿರೂಪಿಸಲು ಸಾಕಷ್ಟು ಪುರಾವೆಗಳಿಲ್ಲ. ಅವರ ಹೆಸರಿನಲ್ಲಿ ಯೂಟ್ಯೂಬ್‌ನಲ್ಲಿ ಹಲವು ವೀಡಿಯೊಗಳು ಕಂಡುಬಂದಿವೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News