ಮಾಧ್ಯಮ ಸ್ವಾತಂತ್ರ್ಯ ದಮನಿಸಲು ಹೊರಟ ಫ್ಯಾಸಿಸ್ಟ್ ನಿಲುವು ಖಂಡನೀಯ: ಎಸ್ಸೆಸ್ಸೆಫ್

Update: 2020-09-29 12:59 GMT

ಬೆಂಗಳೂರು, ಸೆ.29: ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ದೇಶದ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಮಾಧ್ಯಮ ಸ್ವಾತಂತ್ರ್ಯವನ್ನು ದಮನಿಸಲು ಹೊರಟಿರುವ ಫ್ಯಾಸಿಸ್ಟ್ ನಿಲುವು ಖಂಡನೀಯವಾಗಿದೆ ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯಿದ್ ಉಮರ್ ಅಸ್ಸಖಾಫ್ ತಿಳಿಸಿದ್ದಾರೆ.

ಮಾಧ್ಯಮಗಳು ತಮ್ಮ ಕೈಗೊಂಬೆಗಳಾಗಿ ಇರಬೇಕು, ತಮ್ಮ ಅಣತಿಯಂತೆ ವರ್ತಿಸಬೇಕು ಎನ್ನುವ ಆಳುವವರ ಮನೋಭಾವ ದೇಶಕ್ಕೂ ರಾಜ್ಯಕ್ಕೂ ಮಾರಕವಾಗಿದೆ. ಒಂದು ಮಾಧ್ಯಮದ ಮೇಲೆ ಅನ್ಯಾಯವಾಗಿ ದೌರ್ಜನ್ಯ ನಡೆಯುವಾಗ ಇತರ ಮಾಧ್ಯಮಗಳು ಮೌನಕ್ಕೆ ಶರಣಾಗಿರುವುದು ಕೂಡ ಅವರ ಭ್ರಷ್ಟತೆಗೆ ಸ್ಪಷ್ಟ ಸಾಕ್ಷಿಯಾಗಿದೆ. ಇದರ ವಿರುದ್ಧ ಪ್ರಜ್ಞಾವಂತ ಜನತೆ ಧ್ವನಿ ಎತ್ತಬೇಕಾದ ಅನಿವಾರ್ಯತೆ ಇದೆ ಎಂದು ಅವರು ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News