ಸಿವಿಲ್ ನೇಮಕಾತಿಯಲ್ಲಿ ಅಂಗವಿಕಲರಿಗೆ ಮೀಸಲಾತಿ: ರಾಜ್ಯ ಸರಕಾರ ಪರಿಷ್ಕೃತ ಆದೇಶ

Update: 2020-09-29 14:18 GMT

ಬೆಂಗಳೂರು, ಸೆ.29: ರಾಜ್ಯದ ಅಂಗವಿಕಲರಿಗೆ ರಾಜ್ಯ ಸಿವಿಲ್ ನೇಮಕಾತಿಗಳಲ್ಲಿ ಮೀಸಲಾತಿ ಕಡ್ಡಾಯಗೊಳಿಸಿ ರಾಜ್ಯ ಸರಕಾರ ಆದೇಶಿಸಿದೆ.

ಸರಕಾರದ ವಿವಿಧ ಇಲಾಖೆಗಳಲ್ಲಿ ಅಂಗವಿಕಲರಿಗೆ ಗ್ರೂಪ್ ಎ ಮತ್ತು ಬಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಶೇ.4ರಷ್ಟು ಹಾಗೂ ಗ್ರೂಪ್ ಸಿ ಮತ್ತು ಡಿ ಹುದ್ದೆಗಳಲ್ಲಿ ಶೇ.5ರಷ್ಟು ಮೀಸಲಾತಿಯಡಿ ರಿಕ್ತ ಸ್ಥಾನಗಳನ್ನು ಗುರುತಿಸಿ ಪರಿಷ್ಕೃತ ಆದೇಶ ಹೊರಡಿಸಿದೆ.

100 ರಿಕ್ತ ಸ್ಥಾನಗಳಿಗೆ ಅನ್ವಯಿಸಿ ಗ್ರೂಪ್ ಎ ಮತ್ತು ಬಿ ಹುದ್ದೆಗಳಲ್ಲಿ ದೃಷ್ಟಿಮಾಂದ್ಯರಿಗೆ ಶೇ 1(4), ಶ್ರವಣ ದೋಷ ಇರುವವರಿಗೆ ಶೇ.1ರಷ್ಟು(44) ಮಿದುಳಿನ ಪಾಶ್ರ್ವವಾಯು, ಕುಷ್ಠರೋಗ ನಿವಾರಿತ ವ್ಯಕ್ತಿಗಳು, ಕುಬ್ಜತೆ, ಆ್ಯಸಿಡ್ ದಾಳಿಗೆ ತುತ್ತಾದವರು ಮತ್ತು ಬಹುವಿಧ ಸ್ನಾಯು ಸವೆತಗೊಂಡವರಿಗೆ ಶೇ 1(24), ಆಟಿಸಂ ಸೇರಿದಂತೆ ಇತರೆ ಬಹುವಿಧ ಅಂಗವಿಕಲತೆ ಇರುವವರಿಗೆ ಶೇ 1(64) ಮೀಸಲಾತಿ ಹಂಚಿಕೆ ಮಾಡಲಾಗಿದೆ.

ಗ್ರೂಪ್ ಸಿ ಮತ್ತು ಡಿ ಹುದ್ದೆಗಳಲ್ಲಿ ದೃಷ್ಟಿಮಾಂದ್ಯರಿಗೆ ಶೇ.1ರಷ್ಟು(4), ಶ್ರವಣದೋಷ ಇರುವವರಿಗೆ ಶೇ.ರಷ್ಟು(44), ಮೆದುಳಿನ ಪಾರ್ಶ್ವವಾಯು, ಕುಷ್ಠರೋಗ ನಿವಾರಿತ ವ್ಯಕ್ತಿಗಳು, ಕುಬ್ಜತೆ, ಆಯಸಿಡ್ ದಾಳಿಗೆ ತುತ್ತಾದವರಿಗೆ ಮತ್ತು ಬಹುವಿಧ ಸ್ನಾಯು ಸವೆತಗೊಂಡವರಿಗೆ ಶೇ2ರಷ್ಟು(24, 84), ಆಟಿಸಂ ಸೇರಿದಂತೆ ಇತರೆ ಬಹುವಿಧ ಅಂಗವಿಕಲತೆ ಇರುವರಿಗೆ ಶೇ.1ರಷ್ಟು(64) ಮೀಸಲಾತಿ ಹಂಚಿಕೆ ಮಾಡಲಾಗಿದೆ.

ಗ್ರೂಪ್-ಸಿ ಮತ್ತು ಗ್ರೂಪ್-ಡಿ ಹುದ್ದೆಗಳ ನೇಮಕಾತಿಯಲ್ಲಿ ಶೇ.5, ಗ್ರೂಪ್-ಎ ಮತ್ತು ಗ್ರೂಪ್-ಬಿ ಹುದ್ದೆಗಳ ನೇಮಕಾತಿಯಲ್ಲಿ ಶೇ.4ರಷ್ಟು ಮೀಸಲಾತಿ ನಿಗದಿಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News