ನಕಲಿ ಡಾಕ್ಟರೇಟ್ ಪದವಿಗೂ ನಮಗೂ ಸಂಬಂಧವಿಲ್ಲ: ಥೆರೆಸಾ ವಿವಿ ಸ್ಪಷ್ಟನೆ

Update: 2020-09-29 16:58 GMT

ಬೆಂಗಳೂರು, ಸೆ.29: ಇಂಟರ್ ನ್ಯಾಷನಲ್ ಗ್ಲೋಬಲ್ ಪೀಸ್ ವಿಶ್ವವಿದ್ಯಾಲಯದ ಹೆಸರಲ್ಲಿ ಇದೇ 26ರಂದು ಮೈಸೂರಿನಲ್ಲಿ ನಡೆದಿರುವ ಡಾಕ್ಟರೇಟ್ ಪದವಿ ಪ್ರದಾನ ಕಾರ್ಯಕ್ರಮಕ್ಕೂ ಮದರ್ ಥೆರೆಸಾ ವಿಶ್ವವಿದ್ಯಾಲಯಕ್ಕೂ ಸಂಬಂಧವಿಲ್ಲ ಎಂದು ವಿಶ್ವವಿದ್ಯಾಲಯದ ಕುಲಪತಿ ಆರ್. ವಿಜಯ ಸರಸ್ವತಿ ಸ್ಪಷ್ಟಪಡಿಸಿದ್ದಾರೆ.

ಮದರ್ ಥೆರೆಸಾ ವಿಶ್ವವಿದ್ಯಾಲಯದಿಂದ ಕೊಟ್ಟಿರುವ ಗೌರವ ಡಾಕ್ಟರೇಟ್ ಪದವಿಗೆ ವಿಶಿಷ್ಟ ಗೌರವವಿದೆ. ಆ ಘನತೆಗೆ ಚ್ಯುತಿ ಮತ್ತು ಧಕ್ಕೆ ತರುವಂತಹ ಕಾರ್ಯ ನಮ್ಮಿಂದ ನಡೆದಿಲ್ಲ. ನಮ್ಮ ವಿಶ್ವವಿದ್ಯಾಲಯದ ಹೆಸರಿನಲ್ಲಿ ಬೇರೆಯವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News