ಪಾಕ್ ಪ್ರತಿಪಕ್ಷ ನಾಯಕನಿಗೆ 14 ದಿನಗಳ ನ್ಯಾಯಾಂಗ ಬಂಧನ

Update: 2020-09-29 18:01 GMT

ಲಾಹೋರ್ (ಪಾಕಿಸ್ತಾನ), ಸೆ. 29: ಭ್ರಷ್ಟಾಚಾರ ಆರೋಪದಲ್ಲಿ ಸೋಮವಾರ ಬಂಧನಕ್ಕೊಳಗಾಗಿದ್ದ ಪಾಕಿಸ್ತಾನದ ಪ್ರತಿಪಕ್ಷ ನಾಯಕ ಶಹಬಾಝ್ ಶರೀಫ್‌ರನ್ನು ಲಾಹೋರ್‌ನ ಅಕೌಂಟಬಿಲಿಟಿ ನ್ಯಾಯಾಲಯವೊಂದು ಮಂಗಳವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

ಮೂರು ಬಾರಿಯ ಪ್ರಧಾನಿ ನವಾಝ್ ಶರೀಫ್‌ರ ಸಹೋದರ ಹಾಗೂ ಪಾಕಿಸ್ತಾನ ಮುಸ್ಲಿಮ್ ಲೀಗ್-ನವಾಝ್ ಪಕ್ಷದ ಅಧ್ಯಕ್ಷರೂ ಆಗಿರುವ ಶಹಬಾಝ್‌ರನ್ನು ಆದಾಯ ಮೀರಿದ ಆಸ್ತಿ ಹೊಂದಿದ ಹಾಗೂ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪಗಳಲ್ಲಿ ಬಂಧಿಸಲಾಗಿತ್ತು.

700 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣದಲ್ಲಿ ಅವರ ಜಾಮೀನು ಅರ್ಜಿಯನ್ನು ಲಾಹೋರ್ ಹೈಕೋರ್ಟ್ ಸೋಮವಾರ ತಿರಸ್ಕರಿಸಿದ ಬಳಿಕ, ನ್ಯಾಯಾಲಯದ ಆವರಣದಿಂದಲೇ ಅವರನ್ನು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News