ನಿಮಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲು ನೈತಿಕತೆ ಇಲ್ಲ: ಆದಿತ್ಯನಾಥ್‌ ಗೆ ಪ್ರಿಯಾಂಕಾ ತರಾಟೆ

Update: 2020-09-30 06:29 GMT

ಹೊಸದಿಲ್ಲಿ, ಸೆ.29:ಎರಡು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರ ಹಾಗೂ ಚಿತ್ರಹಿಂಸೆಗೆ ಒಳಗಾದ ಬಳಿಕ ಭೀಕರ ಗಾಯದಿಂದಾಗಿ ದಿಲ್ಲಿಯ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದ 20ರ ಹರೆಯದ ಯುವತಿಯನ್ನು ರಾತೋರಾತ್ರಿ ಅಂತ್ಯಸಂಸ್ಕಾರ ನಡೆಸಿದ ಉತ್ತರಪ್ರದೇಶ ಪೊಲೀಸರ ವರ್ತನೆಯನ್ನು ಖಂಡಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ , ನೀವು ಮೊದಲು ಸಂತ್ರಸ್ತೆಯ ತಂದೆಯ ಹತಾಶೆಯ ಅಳಲು ಕೇಳಿ. ನಿಮಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ ಎಂದು ಮುಖ್ಯಮಂತ್ರಿ ಆದಿತ್ಯನಾಥ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹತ್ರಾಸ್ ಸಂತ್ರಸ್ತೆಯ ತಂದೆಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಅವರ ಮಗಳು ತೀರಿಕೊಂಡಿದ್ದನ್ನು ತಿಳಿಸಿದರು. ಅವರು ಹತಾಶೆಯೊಂದಿಗೆ ಕೂಗುತ್ತಿರುವುದನ್ನು ನಾನು ಕೇಳಿದೆ ಎಂದು ಸರಣಿ ಟ್ವೀಟ್‌ಗಳಲ್ಲಿ ಪ್ರಿಯಾಂಕಾ ಹೇಳಿದ್ದಾರೆ.

ನನ್ನ ಮಗಳಿಗೆ ನ್ಯಾಯ ಬೇಕು ಎಂದು ಅವರು ನನ್ನಲ್ಲಿ ಹೇಳಿದ್ದರು. ಕಳೆದ ರಾತ್ರಿ ಅವರು ತಮ್ಮ ಮಗಳನ್ನು ಕೊನೆಯ ಬಾರಿ ಮನೆಗೆ ಕರೆದುಕೊಂಡು ಹೋಗಿ ಅಂತಿಮ ವಿಧಿಗಳನ್ನು ನಿರ್ವಹಿಸುವ ಅವಕಾಶವನ್ನು ಕಸಿದುಕೊಂಡರು. ನಿಮ್ಮ ಸರಕಾರ ಅವರಿಗೆ ಸಹಕಾರ ನೀಡುವ ಬದಲಿಗೆ ಸಾವು ಸಹಿತ ಪ್ರತಿಯೊಂದು ಮಾನವ ಹಕ್ಕುಗಳನ್ನು ಕಸಿದುಕೊಳ್ಳಲು ಸಹಕರಿಸಿತು. ನಿಮಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲು ನೈತಿಕ ಹಕ್ಕಿಲ್ಲ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News