ಉತ್ತರಪ್ರದೇಶ: 14ರ ಅಪ್ರಾಪ್ತ ಬಾಲಕಿಯ ಅತ್ಯಾಚಾರ

Update: 2020-10-01 07:02 GMT

ಬುಲಂದ್‌ಶಹರ್, ಅ.1: ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ನೆರೆಮನೆಯಾತನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಅತ್ಯಾಚಾರದ ಕುರಿತು ಬಾಲಕಿಯ ತಂದೆ ಬುಧವಾರ ರಾತ್ರಿ ದೂರು ದಾಖಲಿಸಿದ್ದು,ತನ್ನ 14ರ ವಯಸ್ಸಿನ ಮಗಳ ಮೇಲೆ 20ರ ವಯಸ್ಸಿನ ನೆರೆಮನೆಯಾತ ಮಂಗಳವಾರ ರಾತ್ರಿ ಅತ್ಯಾಚಾರ ನಡೆಸಿರುವುದಾಗಿ ದೂರು ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಸಂತೋಷ್ ಕುಮಾರ್ ಸಿಂಗ್ ಹೇಳಿದ್ದಾರೆ.

ಬಾಲಕಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಪಿಯ ವಿರುದ್ಧ ವರದಿ ದಾಖಲಾಗಿದ್ದು, ಆತನನ್ನು ಸೆರೆ ಹಿಡಿಯುವ ಪ್ರಯತ್ನ ನಡೆಸಲಾಗುತ್ತಿದೆ. ಶೀಘ್ರವೇ ಆರೋಪಿಯನ್ನು ಕಸ್ಟಡಿಗೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News