ಶಿವಮೊಗ್ಗ: ರೈತ ವಿರೋಧಿ ಕಾಯ್ದೆಯನ್ನು ವಿರೋಧಿಸಿ ರೈತರಿಂದ ನಿರಶನ

Update: 2020-10-02 06:57 GMT

ಶಿವಮೊಗ್ಗ, ಅ.2: ಇತ್ತೀಚೆಗೆ ನಡೆದ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಕೃಷಿ ಮಾರುಕಟ್ಟೆ, ಕೃಷಿ ಭೂಮಿ ಮತ್ತು ಭೂ ಸುಧಾರಣೆ, ಭೂ ಸ್ವಾಧಿನ ತಿದ್ದುಪಡಿ ಮಸೂದೆಗಳನ್ನು ಕಾನೂನು ಮಾಡಲು ಹೊರಟಿರುವ ಸರಕಾರದ ಕ್ರಮವನ್ನು‌ ಖಂಡಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕರ್ನಾಟಕ ಜನಶಕ್ತಿ, ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಗಾಂಧಿ ಜಯಂತಿ ದಿನವಾದ ಇಂದು ನಗರದ ಗೋಪಿ ವೃತ್ತದಲ್ಲಿ ಒಂದು ದಿನದ ಸಾಂಕೇತಿಕ ನಿರಶನ ನಡೆಸಿದರು.

ಗಾಂಧಿ ಕಂಡ ಗ್ರಾಮ ಭಾರತವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ನಾಶಪಡಿಸಿ, ಕಾರ್ಪೊರೇಟ್ ಕಂಪೆನಿ ಹಾಗೂ ಬಹುರಾಷ್ಟ್ರೀಯ ಕಂಪೆನಿಗಳ ರಾಷ್ಟ್ರವಾಗಿ ಪರಿವರ್ತಿಸಲು ಹೊರಟಿದೆ. ಕೇಂದ್ರ ಸರಕಾರದ ತೀರ್ಮಾನ ದಿಂದ ಕೃಷಿ ವಲಯಕ್ಕೆ ಅಪಾಯಕಾರಿ ಕಾನೂನು ರೂಪಿಸಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ಕೃಷಿ ಮಾರುಕಟ್ಟೆ ಮತ್ತು ಕೃಷಿ ಭೂಮಿಯನ್ನು ಉಡುಗೊರೆಯಾಗಿ ನೀಡಲು ಹೊರಟಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್ ಬಸವರಾಜಪ್ಪ, ಕೋಮು ಸೌಹಾರ್ದ ವೇದಿಕೆಯ ಮುಖಂಡ ಕೆ.ಎಲ್.ಅಶೋಕ್, ಅನನ್ಯ ಶಿವು, ರೈತ ಮುಖಂಡ ಹಿಟ್ಟೂರು ರಾಜು ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News