ರಾಹುಲ್ ಗಾಂಧಿಯೊಂದಿಗೆ ಪೊಲೀಸರ ವರ್ತನೆ ಖಂಡಿಸಿದ ಶಿವಸೇನೆ

Update: 2020-10-02 07:27 GMT

ಮುಂಬೈ, ಅ.2: ಸಾಮೂಹಿಕ ಅತ್ಯಾಚಾರ ಹಾಗೂ ಚಿತ್ರಹಿಂಸೆಯಿಂದ ಮೃತಪಟ್ಟಿರುವ ದಲಿತ ಯುವತಿಯ ಕುಟುಂಬವನ್ನು ಭೇಟಿಯಾಗಿ ಸಾಂತ್ವಾನ ಹೇಳಲು ಹತ್ರಸ್‌ಗೆ ಹೊರಟ್ಟಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಉತ್ತರಪ್ರದೇಶ ಪೊಲೀಸರ ವರ್ತನೆಯನ್ನು ಶಿವಸೇನೆಯ ಸಂಸದ ಸಂಜಯ ರಾವತ್ ಖಂಡಿಸಿದ್ದಾರೆ.

"ರಾಹುಲ್ ಗಾಂಧಿ ಓರ್ವ ರಾಷ್ಟ್ರೀಯ ರಾಜಕೀಯ ನಾಯಕ. ನಮಗೆ ಕಾಂಗ್ರೆಸ್‌ನೊಂದಿಗೆ ಭಿನ್ನಾಭಿಪ್ರಾಯವಿರಬಹುದು. ಆದರೆ ಅವರೊಂದಿಗೆ ಪೊಲೀಸರ ವರ್ತನೆಯನ್ನು ಯಾರೂ ಕೂಡ ಬೆಂಬಲಿಸುವುದಿಲ್ಲ. ಅವರ ಕಾಲರನ್ನು ಹಿಡಿಯಲಾಗಿತ್ತು. ಅವರನ್ನು ನೆಲಕ್ಕೆ ಬೀಳಿಸಲಾಗಿತ್ತು. ಒಂದು ರೀತಿಯಲ್ಲಿ ಇದು ದೇಶದ ಪ್ರಜಾಪ್ರಭುತ್ವದ ಮೇಲೆ ನಡೆದ ಸಾಮೂಹಿಕ ದೌರ್ಜನ್ಯವಾಗಿದೆ'' ಎಂದು ಸಂಜಯ್ ರಾವತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News