ಶಿವಮೊಗ್ಗ: ಲೈಂಗಿಕ ದೌರ್ಜನ್ಯಕ್ಕೀಡಾದ ಬಾಲಕಿ ಆತ್ಮಹತ್ಯೆ; ಸೋದರ ಸಂಬಂಧಿಯ ಬಂಧನ

Update: 2020-10-02 09:21 GMT

ಶಿವಮೊಗ್ಗ, ಅ.2: ಸೋದರ ಸಂಬಂಧಿಯಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಗರ್ಭವತಿಯಾದ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಬಾಲಕಿಯ ದೊಡ್ಡಪ್ಪನ ಮಗ ರಾಘು ಎಂಬಾತನನ್ನು ಬಂಧಿಸಿದ್ದಾರೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ 16ವರ್ಷದ ಬಾಲಕಿಯೊಂದಿಗೆ ದೊಡ್ಡಮ್ಮನ ಮಗ ದೈಹಿಕ ಸಂಪರ್ಕ ಬೆಳೆಸಿ, ನಿರಂತರ ಆತ್ಯಾಚಾರ ಎಸಗಿದ್ದಾನೆ, ಇದರಿಂದ ಗರ್ಭವತಿಯಾಗಿರುವ ಬಾಲಕಿ ‘’ರಾಘು ಅಣ್ಣ ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡ. ಈ ವಿಷಯವನ್ನು ನಿಮ್ಮ ಬಳಿ ಹೇಳಲಾಗದೆ ಮನನೊಂದಿರುವೆ. ಕ್ಷಮಿಸಿ’’ ಎಂದು ಡೆತ್‌ನೋಟ್ ಬರೆದಿಟ್ಟು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News