ಪ್ರಿಯಾಂಕಾ ಗಾಂಧಿ ಅವರೊಂದಿಗೆ ಪೊಲೀಸರ ವರ್ತನೆಯನ್ನು ತೀವ್ರವಾಗಿ ಟೀಕಿಸಿದ ಬಿಜೆಪಿ ನಾಯಕಿ

Update: 2020-10-04 18:39 GMT

 ಮುಂಬೈ, ಅ.4: ಹತ್ರಸ್ ಸಾಮೂಹಿಕ ಅತ್ಯಾಚಾರದ ವಿರುದ್ದ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯ ಮೇಲೆ ಹಲ್ಲೆಗೆ ಮುಂದಾಗಿರುವ ಉತ್ತರಪ್ರದೇಶದ ಪೊಲೀಸರ ವಿರುದ್ಧ್ದ ಮಹಾರಾಷ್ಟ್ರ ಬಿಜೆಪಿಯ ಉಪಾಧ್ಯಕ್ಷೆ ಚಿತ್ರಾ ಕಿಶೋರ್ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಹತ್ರಸ್ ದಲಿತ ಯುವತಿಯ ಮೇಲೆ ನಡೆದಿದ್ದ ಅತ್ಯಾಚಾರ ಘಟನೆಯ ವಿರುದ್ದ ಪ್ರತಿಭಟಿಸುತ್ತಿದ್ದಾಗ ಉತ್ತರಪ್ರದೇಶ ಪೊಲೀಸರು ಅವರ ಮೇಲೆ ಹಲ್ಲೆ ನಡೆಸಿದ್ದರು.

 ಈ ಕುರಿತು ತನ್ನ ಅಧಿಕೃತ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ ಚಿತ್ರಾ ಕಿಶೋರ್,‘‘ಮಹಿಳಾ ನಾಯಕಿಯೊಬ್ಬರ ಬಟ್ಟೆಗಳ ಮೇಲೆ ಪುರುಷ ಪೊಲೀಸ್ ಕೈ ಮಾಡುವ ಧೈರ್ಯ ಮಾಡಿದ್ದು ಹೇಗೆ. ಎಲ್ಲ ಮಹಿಳೆಯರು ಪ್ರಿಯಾಂಕಾರ ಬೆಂಬಲಕ್ಕೆ ಮುಂದಾದರೆ, ಪ್ರತಿಯೊಬ್ಬ ಪೊಲೀಸರು ಲಕ್ಷಣ ರೇಖೆ ದಾಟಬಾರದೆನ್ನುವುದನ್ನು ನೆನಪಿಟ್ಟುಕೊಳ್ಳುತ್ತಾರೆ’’ ಎಂದು ಟ್ವೀಟ್ ಮಾಡಿದರು.

ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉತ್ತರಪ್ರದೇಶದ ಮುಖ್ಯಮಂತ್ರಿಯನ್ನು ಆಗ್ರಹಿಸಿರುವ ಚಿತ್ರಾ, ‘‘ಮುಖ್ಯಮಂತ್ರಿಗಳಿಗೆ ಭಾರತೀಯ ಸಂಸ್ಕೃತಿಯ ಮೇಲೆ ನಂಬಿಕೆ ಇದ್ದು, ಇಂತಹ ಪೊಲೀಸರ ವಿರುದ್ಧ ದಯವಿಟ್ಟು ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News