ಸರಕಾರಿ ಮದ್ರಸ, ಸಂಸ್ಕೃತ ಶಾಲೆಗಳನ್ನು ಮುಚ್ಚಲು ನಿರ್ಧರಿಸಿದ ಅಸ್ಸಾಂ ಸರಕಾರ

Update: 2020-10-10 13:42 GMT
 ಹಿಮಂತ ಬಿಸ್ವ ಶರ್ಮ

ಗುವಹಾತಿ: ಅಸ್ಸಾಂ ರಾಜ್ಯದಲ್ಲಿರುವ ಎಲ್ಲಾ ಸರಕಾರಿ ಮದ್ರಸ ಮತ್ತು ಸಂಸ್ಕೃತ ಶಾಲೆಗಳನ್ನು ಮುಚ್ಚಲಾಗುವುದು ಎಂದು ರಾಜ್ಯದ ಶಿಕ್ಷಣ ಮತ್ತು ಹಣಕಾಸು ಸಚಿವ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ. ಸರಕಾರಿ ಹಣದಿಂದ ಧಾರ್ಮಿಕ ಶಿಕ್ಷಣ ನೀಡುವುದನ್ನು ಅನುಮತಿಸಲು ಸಾಧ್ಯವಿಲ್ಲ ಎಂದು ಹೇಳಿದ ಸಚಿವರು ಸರಕಾರದ ಆದೇಶ ಕುರಿತಾದ ಅಧಿಸೂಚನೆಯನ್ನು ನವೆಂಬರ್ ತಿಂಗಳಲ್ಲಿ ಹೊರಡಿಸಲಾಗುವುದು ಎಂದಿದ್ದಾರೆ.

ಖಾಸಗಿ ಸಂಸ್ಥೆಗಳು ನಡೆಸುವ ಮದ್ರಸಾ ಮತ್ತು ಸಂಸ್ಕೃತ ಶಾಲೆಗಳ ಕುರಿತು ಸರಕಾರಕ್ಕೆ ಹೇಳಲು ಏನೂ ಇಲ್ಲ ಎಂದ ಅವರು, ಸರಕಾರಿ ಮದ್ರಸಾ ಮತ್ತು ಸಂಸ್ಕೃತ ಶಾಲೆಗಳನ್ನು ಮುಚ್ಚಿದ ನಂತರ ಅವುಗಳ 48 ಗುತ್ತಿಗೆ ಶಿಕ್ಷಕರನ್ನು ಶಿಕ್ಷಣ ಇಲಾಖೆ ನಡೆಸುವ ಶಾಲೆಗಳಿಗೆ ವರ್ಗಾಯಿಸಲಾಗುವುದು ಎಂದಿದ್ದಾರೆ.

ಅಸ್ಸಾಂನಲ್ಲಿ 614 ಸರಕಾರಿ ಮದ್ರಸಾಗಳಿದ್ದರೆ 900 ಖಾಸಗಿ ಮದ್ರಸಾಗಳಿವೆ. ಸರಕಾರಿ ಮದ್ರಸಾಗಳ ಪೈಕಿ 57 ಬಾಲಕಿಯರ ಮದ್ರಸಾ, ಮೂರು ಬಾಲಕರ ಮದ್ರಸಾ ಹಾಗೂ 554 ಮದ್ರಸಾಗಳಲ್ಲಿ ಬಾಲಕ-ಬಾಲಕಿಯರಿಗೆ ಸಹ-ಶಿಕ್ಷಣ ನೀಡಲಾಗುತ್ತಿದೆ. ಖಾಸಗಿ ಮದ್ರಸಾಗಳಲ್ಲಿ ಹೆಚ್ಚಿನವು ಜಮೀಯತ್ ಉಲಾಮ ಆಡಳಿತದಲ್ಲಿದೆ. ಅಂತೆಯೇ ರಾಜ್ಯದಲ್ಲಿ 100 ಸರಕಾರಿ ಸಂಸ್ಕೃತ ಶಾಲೆಗಳು ಹಾಗೂ 500 ಖಾಸಗಿ ಸಂಸ್ಕೃತ ಶಾಲೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News