3 ಲಕ್ಷ ರೂ. ಮೌಲ್ಯದ 32 ಕೆಜಿ ಗಾಂಜಾ ವಶ: ಆರೋಪಿ ನಾಪತ್ತೆ

Update: 2020-10-13 18:50 GMT

ಬಳ್ಳಾರಿ, ಅ.13: ಜಿಲ್ಲೆಯ ಸಂಡೂರು ತಾಲೂಕಿನ ಸುಶೀಲಾನಗರದ ಹೊರವಲಯದ ಹೊಲವೊಂದರಲ್ಲಿ ಬೆಳೆಯಲಾಗಿದ್ದ ಗಾಂಜಾ ಬೆಳೆಯ ಮೇಲೆ ಮಂಗಳವಾರ ದಿಢೀರ್ ದಾಳಿ ನಡೆಸಿದ ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡವು 3 ಲಕ್ಷ ರೂ.ಮೌಲ್ಯದ 32 ಕೆಜಿ (142 ಗಾಂಜಾ ಗಿಡಗಳು) ಗಾಂಜಾ ವಶಪಡಿಸಿಕೊಂಡಿದೆ.

ಹೊಲದ ಮಾಲಕನಾದ ಆರೋಪಿ ನಾಪತ್ತೆಯಾಗಿದ್ದು, ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ. ಅಬಕಾರಿ ಜಿಲ್ಲಾಧಿಕಾರಿ ಸಯೀದಾ ಅಫ್ರೀನ್, ಡಿವೈಎಸ್ಪಿ ಬಸಪ್ಪ ಪೂಜಾರ್ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಗಳಾದ ಶಂಕರ್ ದೊಡ್ಡಮನಿ, ವಿಜಯಕುಮಾರ್ ಸೆಲವಡೆ, ಜ್ಯೋತಿಬಾಯಿ, ತುಕಾರಾಂ, ಆಂಜನೇಯ ಸೇರಿದಂತೆ ಅಬಕಾರಿ ಇಲಾಖೆಯ ಸಿಬ್ಬಂದಿ ಮಂಗಳವಾರ ದಿಢೀರ್ ದಾಳಿ ನಡೆಸಿ 8 ಅಡಿ ಎತ್ತರಕ್ಕೆ ಬೆಳೆದು ನಿಂತಿದ್ದ 142 ಗಾಂಜಾ ಗೀಡಗಳನ್ನು ವಶಪಡಿಸಿಕೊಂಡರು.

ಸಂಡೂರು ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News