ಸಿಬಿಐ ತನಿಖೆಗೆ ಆಗ್ರಹಿಸಿ ಸುಪ್ರೀಂ ಮೆಟ್ಟಿಲೇರಿದ ರಿಪಬ್ಲಿಕ್ ಟಿವಿ: ಮುಂಬೈ ಪೊಲೀಸರ ಆಕ್ಷೇಪ

Update: 2020-10-15 05:14 GMT

 ಮುಂಬೈ: ಟಿಆರ್‌ಪಿ ತಿರುಚಿದ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಕೋರಿ ರಿಪಬ್ಲಿಕ್ ಟಿವಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯನ್ನು ಮುಂಬೈ ಪೊಲೀಸರು ವಿರೋಧಿಸಿದ್ದಾರೆ.

 ಈ ಪ್ರಕರಣದಲ್ಲಿ ಪೊಲೀಸ್ ತನಿಖೆಯನ್ನು ತಡೆಯಲು ಟಿವಿ ಚಾನೆಲ್ ಪ್ರಯತ್ನಿಸುತ್ತಿದೆ. ಈ ಪ್ರಕರಣದಲ್ಲಿ ಕಾರ್ಯಕ್ರಮಗಳನ್ನು ನಡೆಸುವ ಮುಖಾಂತರ ಹಾಗೂ ಸಾಕ್ಷಿಯನ್ನು ಬೆದರಿಸುವ ಮೂಲಕ ರಿಪಬ್ಲಿಕ್ ಟಿವಿ ಕಾನೂನು ಪ್ರಕ್ರಿಯೆಯನ್ನು ದುರಪಯೋಗಪಡಿಸುತ್ತಿದೆ ಎಂದು ಕಳೆದ ತಡ ರಾತ್ರಿ ಸುಪ್ರೀಂಕೋರ್ಟ್‌ಗೆ ಸಲ್ಲಸಿರುವ ಮುಂಗಡ ಅರ್ಜಿಯಲ್ಲಿ ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕೆಂಬ ರಿಪಬ್ಲಿಕ್ ಟಿವಿಯ ಬೇಡಿಕೆಯು ತಪ್ಪಾಗಿ ಗ್ರಹಿಸಲ್ಪಟ್ಟಿದೆ. ರಿಪಬ್ಲಿಕ್ ಟಿವಿ ಟಿಆರ್‌ಪಿ ರೇಟಿಂಗ್ ತಿರುಚಿದ ಪ್ರಕರಣದ ತನಿಖೆಯನ್ನು ತಡೆಯಲು ಬಯಸಿದೆ. ಅರ್ನಬ್ ಗೋಸ್ವಾಮಿ (ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ)ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಸಾಕ್ಷಿಗಳನ್ನು ಸಂಪರ್ಕಿಸುವುದು ಹಾಗೂ ಸಾಕ್ಷಿಯನ್ನು ಹಸ್ತಕ್ಷೇಪ ಮಾಡುವುದು ಹಾಗೂ ಬೆದರಿಸುವ ಮೂಲಕ ಈ ಪ್ರಕರಣದ ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ ಎಂದು ಪೊಲೀಸರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಇಂದೂ ಮಲ್ಹೋತ್ರಾ ಹಾಗೂ ಇಂದಿರಾ ಬ್ಯಾನರ್ಜಿ ಅವರ ಮೂವರು ನ್ಯಾಯಾಧೀಶರ ಪೀಠವು ರಿಪಬ್ಲಿಕ್ ಟಿವಿಯ ಅರ್ಜಿಯನ್ನು ಇಂದು ವೀಡಿಯೊ ಲಿಂಕ್ ಮೂಲಕ ಆಲಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News