​ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ, ಹತ್ಯೆ: ಇಬ್ಬರಿಗೆ ಮರಣ ದಂಡನೆ

Update: 2020-10-16 03:44 GMT

ಮೀರಠ್ : ಹಾಪುರದಲ್ಲಿ ಎರಡು ವರ್ಷ ಹಿಂದೆ 12 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಮರಣ ದಂಡನೆ ವಿಧಿಸಿ ಪೋಕ್ಸೋ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ವಿಶೇಷ ನ್ಯಾಯಾಧೀಶೆ ವೀಣಾ ನಾರಾಯಣ್ ಈ ತೀರ್ಪು ನೀಡಿದ್ದಾರೆ.

"ಸಂತ್ರಸ್ತೆಯ ಸಹೋದರ ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ. ಈತ ಸತ್ತಿದ್ದಾಗಿ ಅಂದಾಜಿಸಿ ಈತನನ್ನು ಬಿಟ್ಟುಹೋಗಿದ್ದರು. ಕುತ್ತಿಗೆಗೆ ಆಗಿರುವ ಗಂಭೀರ ಗಾಯದಿಂದಾಗಿ ಆತ ಮಾತನಾಡಲು ಸಾಧ್ಯವಾಗಿರಲಿಲ್ಲ. ಆಧರೆ ತನಿಖೆ ಮತ್ತು ವಿಚಾರಣೆ ಹಂತದಲ್ಲಿ ಆತ ಲಿಖಿತ ಹೇಳಿಕೆ ನೀಡಿದ್ದ" ಎಂದು ಪೋಕ್ಸೋ ನ್ಯಾಯಾಲಯದ ವಿಶೇಷ ಅಭಿಯೋಜಕ ಹರೇಂದ್ರ ತ್ಯಾಗಿ ವಿವರ ನೀಡಿದ್ದಾರೆ.

ಶಿಕ್ಷೆಗೆ ಒಳಗಾಗಿರುವ ಅಂಕುರ್ ತೆಲಿ ಮತ್ತು ಸೋನು ಎಂಬುವವರು ಬಾಲಕಿಯ ಮನೆಯಲ್ಲಿ ಕೆಲಸಕ್ಕಿದ್ದರು. 2018ರ ಸೆಪ್ಟೆಂಬರ್ 9ರಂದು ಬಾಲಕಿಯ ಪೋಷಕರು ಕೆಲಸಕ್ಕೆ ಹೋಗಿದ್ದಾಗ 10 ವರ್ಷದ ಸಹೋದರ ಮತ್ತು ಬಾಲಕಿ ಮಾತ್ರ ಮನೆಯಲ್ಲಿದ್ದರು. ಇಬ್ಬರು ಆರೋಪಿಗಳು ಬಾಲಕಿ ಮೇಲೆ ಅತ್ಯಾಚಾರ ನಡೆಸುತ್ತಿದ್ದಾಗ ಬಾಲಕ ಕೂಗಿಕೊಂಡಿದ್ದ. ಈ ವೇಳೆ ಆತನ ಕತ್ತು ಸೀಳಿದ್ದು, ಆತ ಮೃತಪಟ್ಟಿದ್ದಾನೆ ಎಂದು ಭಾವಿಸಿದ್ದರು. ಬಳಿಕ ಬಾಲಕಿಯನ್ನು ಕೊಂದು ಹುಲ್ಲಿನ ಗೋದಾಮಿನಲ್ಲಿ ಶವ ಎಸೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News