ಕೋವಿಡ್ ಎಂಬುದಿಲ್ಲ ಎಂದಿದ್ದ ಫಿಟ್ನೆಸ್ ತರಬೇತುದಾರ ಅದೇ ಸೋಂಕಿಗೆ ಬಲಿ

Update: 2020-10-19 09:11 GMT
ಡ್ಮಿಟ್ರಿ ಸ್ಟುಝಕ್ (Photo: Instagram)

ಹೊಸದಿಲ್ಲಿ : ಕೋವಿಡ್-19 ಎಂಬುದಿಲ್ಲ ಎಂದು ಒಮ್ಮೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಫಾಲೋವರ್ಸ್‍ಗೆ ಹೇಳಿದ್ದ ಉಕ್ರೇನ್‍ನ 33 ವರ್ಷದ ಫಿಟ್ನೆಸ್ ತರಬೇತುದಾರ ಡ್ಮಿಟ್ರಿ ಸ್ಟುಝಕ್  ಅದೇ ಸೋಂಕಿಗೆ ಬಲಿಯಾಗಿದ್ದಾರೆ.  ಆತನ ಸಾವಿನ ಸುದ್ದಿಯನ್ನು ಆತನ ಮಾಜಿ ಪತ್ನಿ ಸೋಫಿಯಾ ತಮ್ಮ ಇನ್‍ಸ್ಟಾಗ್ರಾಂ ಪೋಸ್ಟ್ ನಲ್ಲಿ ದೃಢೀಕರಿಸಿದ್ದಾರೆ.

"ನನಗೆ ಆ ಸೋಂಕು ತಗಲುವ ತನಕ ಕೋವಿಡ್ ಎಂಬುದಿಲ್ಲ ಎಂದು ನಾನು ಅಂದುಕೊಂಡಿದ್ದೆ. ಕೋವಿಡ್-19 ರೋಗ ಅಲ್ಪಾವಧಿಯದ್ದಲ್ಲ! ಅದು ಭಾರವಾಗಿದೆ,'' ಎಂದು ಅವರು ಹೇಳಿದ್ದರು.

ಟರ್ಕಿಯಲ್ಲಿರುವ ವೇಳೆ ಸ್ಟುಝುಕ್ ಅವರಿಗೆ ಉಸಿರಾಟದ ಸಮಸ್ಯೆ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಅವರು ಅಲ್ಲಿಂದ ವಾಪಸಾದ ನಂತರ ಕೋವಿಡ್ ಸೋಂಕು ತಗಲಿರುವುದು ದೃಢಪಟ್ಟಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಂಟು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಅಕ್ಟೋಬರ್ 15ರಂದು ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ಅನುಮತಿಸಲಾಗಿತ್ತು. ಆದರೆ ಮರುದಿನವೇ ಅವರು ಸೋಂಕಿಗೆ ಬಲಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News