ಉತ್ತರ ಕರ್ನಾಟಕದಲ್ಲಿ ಮಹಾಮಳೆ: ಈರುಳ್ಳಿ ಬೆಲೆ ದಿಢೀರ್ ಏರಿಕೆ

Update: 2020-10-19 11:52 GMT

ಬೆಂಗಳೂರು, ಅ.19: ಉತ್ತರ ಕರ್ನಾಟಕದಲ್ಲಾಗುತ್ತಿರುವ ಮಹಾಮಳೆಯಿಂದ ಈರುಳ್ಳಿ ಬೆಲೆ ದಿಢೀರ್ ಏರಿಕೆಯಾಗಿದೆ. ಈ ಮೊದಲು 1 ಕೆಜಿ ಈರುಳ್ಳಿಗೆ 20 ರೂ.ನಿಂದ 25 ರೂ. ಇತ್ತು. ಆದರೆ ಈಗ ಅದರ ಸದ್ಯದ ಬೆಲೆ 60ರಿಂದ70ಕ್ಕೆ ಏರಿಕೆಯಾಗಿದೆ.

ಮಳೆಯಿಂದ ಬೆಳೆ ಹಾನಿಯಾದ ಕಾರಣಕ್ಕೆ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ. ಹೀಗಾಗಿ ದರ ಹೆಚ್ಚಾಗಿದೆ. ಹಿಂದೆ ಪ್ರತಿದಿನ 1 ಸಾವಿರ ಲಾರಿ ಲೋಡ್ ಈರುಳ್ಳಿ ಪೂರೈಕೆಯಾಗುತ್ತಿತ್ತು. ಆದರೆ ಈಗ ಪ್ರತಿದಿನ 150 ಲಾರಿ ಲೋಡ್ ಮಾತ್ರ ಪೂರೈಕೆಯಾಗುತ್ತಿದೆ. ಜೊತೆಗೆ ಮಹಾರಾಷ್ಟ್ರದಿಂದ ಪೂರೈಕೆಯಾಗುತ್ತಿದ್ದ ಈರುಳ್ಳಿ ನಿಂತುಹೋಗಿದೆ. ಮುಂದಿನ ದಿನಗಳಲ್ಲಿ ಈರುಳ್ಳಿ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಈರುಳ್ಳಿ ವ್ಯಾಪಾರಸ್ಥರು ಹೇಳುತ್ತಾರೆ.

ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಇದರಿಂದ ಈರುಳ್ಳಿ ಬೆಳೆ ಹಾನಿಯಾಗಿದೆ. ಹಾಗೂ ಕೆಲ ಕಡೆ ರೈತರು ಬೆಳೆದ ಈರುಳ್ಳಿ ಕೊಳೆತು ಹೋಗಿದೆ. ಇದರಿಂದ ಈರುಳ್ಳಿ ಬೆಲೆ ದಿಢೀರ್ ಏರಿಕೆ ಕಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News