ರುಬ್ಲೆವ್‌ಗೆ 2020ರಲ್ಲಿ 4ನೇ ಪ್ರಶಸ್ತಿ

Update: 2020-10-19 18:43 GMT

ಸೈಂಟ್‌ಪೀಟರ್ಸ್‌ಬರ್ಗ್: ಸೈಂಟ್‌ಪೀಟರ್ಸ್‌ಬರ್ಗ್ ಟೆನಿಸ್ ಟೂರ್ನಿಯ ಪಂದ್ಯದಲ್ಲಿ ಬೊರ್ನಾ ಕೋರಿಕ್ ಅವರನ್ನು 7-6 (5), 6-4 ಸೆಟ್‌ಗಳಿಂದ ಸೋಲಿಸಿದ ಆ್ಯಂಡ್ರೆ ರುಬ್ಲೆವ್ ಅವರು ಈ ಋತುವಿನಲ್ಲಿ ನಾಲ್ಕನೇ ಟೂರ್ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

 ಈ ಗೆಲುವು ಮುಂದಿನ ತಿಂಗಳು ಎಟಿಪಿ ಫೈನಲ್‌ನಲ್ಲಿ ಸ್ಥಾನಗಳಿಸಲು ರುಬ್ಲೆವ್‌ಗೆ ಹತ್ತಿರವಾಗಲಿದೆ. ಸೋಮವಾರ ಮೊದಲ ಬಾರಿಗೆ ಶ್ರೇಯಾಂಕದಲ್ಲಿ ಅಗ್ರ 10 ಸ್ಥಾನಗಳಿಗೆ ಬಡ್ತಿ ಪಡೆದರು. ರಶ್ಯದ ಆಟಗಾರ ಜನವರಿ ತಿಂಗಳಲ್ಲಿ ಖತಾರ್ ಮತ್ತು ಅಡಿಲೇಡ್ ಪ್ರಶಸ್ತಿಗಳನ್ನು ಗೆದ್ದರು ಹಾಗೂ ಕಳೆದ ತಿಂಗಳು ಹ್ಯಾಂಬರ್ಗ್ ಪ್ರಶಸ್ತಿಯನ್ನು ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News