ಸತತ 2ನೇ ಶತಕ ಸಿಡಿಸಿದ ಶಿಖರ್‌ ಧವನ್: ಪಂಜಾಬ್ ಗೆಲುವಿಗೆ 165 ರನ್ ಗುರಿ

Update: 2020-10-20 15:54 GMT

ದುಬೈ: ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿರುವ ಶಿಖರ್‌ ಧವನ್‌ ಬಾರಿಸಿದ ಸತತ 2 ಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಉತ್ತಮ ಮೊತ್ತ ಗಳಿಸಿದ್ದು, ಪಂಜಾಬ್ ಗೆಲುವಿಗೆ 165 ರನ್ ಗುರಿ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು.

ಆರಂಭಿಕ ಆಟಗಾರ ಶಿಖರ್‌ ಧವನ್ ಸತತ ಎರಡನೇ ಶತಕ ಬಾರಿಸಿ ಮಿಂಚಿದರು. ಅವರು 61 ಎಸೆತಗಳಲ್ಲಿ 106 ರನ್ ಸಿಡಿಸಿದರು. ಡೆಲ್ಲಿ ತಂಡದ ಉಳಿದ ಆಟಗಾರರು 59 ಎಸೆತಗಳಲ್ಲಿ ಕೇವಲ 58 ರನ್ ಬಾರಿಸಿದರು.

ಪಂಜಾಬ್ ಪರ ಮುಹಮ್ಮದ್ ಶಮಿ 2, ಅಶ್ವಿನ್, ನೀಶಮ್ ಹಾಗೂ ಮ್ಯಾಕ್ಸ್ ವೆಲ್ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News