ಕೊರೋನ ಲಸಿಕೆ ಅಭಿಯಾನದಲ್ಲಿ ವಿವಿಧ ಐಡಿ ಬಳಕೆಗೆ ಅವಕಾಶ: ಕೇಂದ್ರ ಸರಕಾರ

Update: 2020-10-21 12:56 GMT

ಹೊಸದಿಲ್ಲಿ, ಅ.21: ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಯೋಜನೆಯಡಿ 2021ರಲ್ಲಿ ಆರಂಭವಾಗುವುದೆಂದು ನಿರೀಕ್ಷಿಸಲಾಗಿರುವ ಕೊರೋನ ಲಸಿಕೆ ಅಭಿಯಾನಕ್ಕೆ ವಿವಿಧ ಗುರುತಿನ ಚೀಟಿಗಳನ್ನು ಬಳಸಬಹುದು ಎಂದು ಕೇಂದ್ರ ಸರಕಾರ ಹೇಳಿದೆ.

ಕೊರೋನ ಲಸಿಕೆಯಿಂದ ಯಾರೂ ವಂಚಿತರಾಗಿಲ್ಲ ಎಂಬುದನ್ನು ಖಾತರಿಪಡಿಸಲು ವಿವಿಧ ಗುರುತು ಚೀಟಿಗಳ ಬಳಕೆಗೆ ಅವಕಾಶ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ. ಇಂತಹ ಗುರುತು ಚೀಟಿಗಳು ಕಡ್ಡಾಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ಈಗ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಡಿಜಿಟಲ್ ಹೆಲ್ತ್ ಮಿಷನ್ ರೂಪಿಸಿರುವ ಡಿಜಿಟಲ್ ವ್ಯವಸ್ಥೆಯಡಿ ಸೇವೆಯನ್ನು ಪಡೆಯಲು ಡಿಜಿಟಲ್ ಗುರುತುಚೀಟಿಯನ್ನು ಕಡ್ಡಾಯಗೊಳಿಸುವುದಿಲ್ಲ. ಆದ್ದರಿಂದ ಲಸಿಕೆ ಪಡೆಯಲು ಗುರುತು ಚೀಟಿಯನ್ನು ಕಡ್ಡಾಯಗೊಳಿಸಲಾಗುವುದು ಅಥವಾ ಆರೋಗ್ಯ ಕಾರ್ಡ್ ಹೊಂದಿಲ್ಲದವರಿಗೆ ಲಸಿಕೆ ಲಭ್ಯವಾಗದು ಎಂಬುದು ತಪ್ಪು ವ್ಯಾಖ್ಯಾನವಾಗಿದೆ’ ಎಂದರು. ವ್ಯಕ್ತಿಯ ಬಳಿ ಬೇರೆ ಆರೋಗ್ಯ ಕಾರ್ಡ್‌ಗಳಿರದಿದ್ದಲ್ಲಿ ಡಿಜಿಟಲ್ ಆರೋಗ್ಯ ಕಾರ್ಡ್ ಬಳಸಬಹುದು. ಚುನಾವಣೆಯ ಸಂದರ್ಭ ಮತದಾನಕ್ಕೆ ವಿವಿಧ ಗುರುತು ಚೀಟಿಯನ್ನು ಬಳಸಿದಂತೆಯೇ, ಕೊರೋನ ಲಸಿಕೆ ಅಭಿಯಾನದಲ್ಲೂ ಬಳಸಬಹುದಾಗಿದೆ ಎಂದು ಭೂಷಣ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News