ಮಕ್ಕಳ ಹವಾಮಾನ ಪ್ರಶಸ್ತಿ ಅಂತಿಮ ಪಟ್ಟಿಯಲ್ಲಿ ಮೂವರು ಭಾರತೀಯ ಮಕ್ಕಳು

Update: 2020-10-21 16:42 GMT
ಫೋಟೊ ಕೃಪೆ: twitter.com

ಹೊಸದಿಲ್ಲಿ, ಅ. 21: ಅಂತರ್ ರಾಷ್ಟ್ರೀಯ ಮಕ್ಕಳ ಹವಾಮಾನ ಪ್ರಶಸ್ತಿ (ಚಿಲ್ಡನ್ಸ್ ಕ್ಲೈಮ್ಯಾಟ್ ಪ್ರೈಝ್)ಯ ಅಂತಿಮ ಪಟ್ಟಿಯಲ್ಲಿ ಆಯ್ಕೆಯಾದ 7 ಮಂದಿಯಲ್ಲಿ ಮೂವರು ಭಾರತೀಯ ಮಕ್ಕಳು ಸೇರಿದ್ದಾರೆ.

ಈ ಪ್ರಶಸ್ತಿಗೆ 24 ದೇಶಗಳಿಂದ 70 ನಾಮನಿರ್ದೇಶನ ಸಲ್ಲಿಕೆಯಾಗಿತ್ತು. ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡ ಮಕ್ಕಳೆಂದರೆ ಮುಂಬೈಯ ಅಡಯ್ ಜೋಷಿ, ಎರ್ನಾಕುಳಂನ ಧ್ರುವ ಸಂಜಯ್ ಹಾಗೂ ತಿರುವನ್ನಾಮಲೈನ ವಿನಿಶಾ ಉಮಾಶಂಕರ್. 13 ವರ್ಷದ ವಿನಿಶಾ ಇದ್ದಲು ಸುಡುವುದನ್ನು ಕಡಿಮೆ ಮಾಡಲು ಸೌರ ಇಸ್ತ್ರಿ ಗಾಡಿ ರೂಪಿಸಿದ್ದಾಳೆ. 17 ವರ್ಷದ ಅಡಯ್ ಜೋಷಿ ಆರೋಗ್ಯಕಾರಿ ಪರಿಸರ ವ್ಯವಸ್ಥೆ ಮರು ಸ್ಥಾಪಿಸಲು ಸಮುದಾಯಗಳಿಗೆ ಸಾಧ್ಯವಾಗುವ ‘ದಿ ರೈಟ್ ಗ್ರೀನ್’ ಅನ್ನು ಸ್ಥಾಪಿಸಿದ್ದಾನೆ. 13 ವರ್ಷದ ಧ್ರುವ ಹಾಗೂ ಆತನ ತಂಡ ಮಾಲಿನ್ಯ ಮುಕ್ತ ಸೌರ ಒಲೆ ಅಭಿವೃದ್ಧಿಪಡಿಸಿದೆ. ಈ ಪ್ರಶಸ್ತಿಗೆ ಈ ವರ್ಷ ಅಮೆರಿಕ, ಭಾರತ ಹಾಗೂ ಮೆಕ್ಸಿಕೋದಿಂದ ಸಲ್ಲಿಕೆಯಾದ ನಾಮನಿರ್ದೇಶನಗಳಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಸ್ವೀಡನ್ ಮೂಲದ ಚಿಲ್ಡ್ರನ್ಸ್ ಕ್ಲೆಮ್ಯಾಟ್ ಫೌಂಡೇಶನ್‌ನ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News