‘ಏರ್‌ ಬಬಲ್’ ವ್ಯವಸ್ಥೆಗೆ ಭಾರತ, ಜಪಾನ್ ಸೇರ್ಪಡೆ

Update: 2020-10-21 17:18 GMT

ಟೋಕಿಯೊ (ಜಪಾನ್), ಅ. 21: ಭಾರತ ಮತ್ತು ಜಪಾನ್‌ ದೇಶಗಳು ಈಗ ‘ಏರ್ ಬಬಲ್’ ವ್ಯವಸ್ಥೆಯ ಭಾಗವಾಗಿವೆ. ಈ ಏರ್ಪಾಡಿನ ಪ್ರಕಾರ, ಜಪಾನಿ ಪ್ರಯಾಣಿಕರು ಟೋಕಿಯೊದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿಲ್ಲ ಎಂದು ಮಂಗಳವಾರ ಟೋಕಿಯೊದಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಒಂದರಲ್ಲಿ ತಿಳಿಸಿದೆ.

‘‘ಭಾರತ ಮತ್ತು ಜಪಾನ್ ಈಗ ಏರ್‌ ಬಬಲ್ ವ್ಯವಸ್ಥೆಯ ಭಾಗವಾಗಿವೆ. ಜಪಾನಿ ಪ್ರಯಾಣಿಕರು ಇನ್ನು ಮುಂದೆ ಟೋಕಿಯೊದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿಲ್ಲ ಹಾಗೂ ಟಿಕೆಟ್‌ಗಳನ್ನು ನೇರವಾಗಿ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳಿಂದ ಖರೀದಿಸಬಹುದು’’ ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News