ಉತ್ತರ ಪ್ರದೇಶ: ಗಡ್ಡ ಬಿಟ್ಟದ್ದಕ್ಕೆ ಎಸ್‍ಐ ಸೇವೆಯಿಂದ ಅಮಾನತು

Update: 2020-10-22 09:16 GMT
Photo: twitter

ಲಕ್ನೋ: ಅನುಮತಿಯಿಲ್ಲದೆ ಗಡ್ಡ ಬೆಳೆಸಿದ್ದಕ್ಕಾಗಿ ಉತ್ತರ ಪ್ರದೇಶದಲ್ಲಿ ಸಬ್ ಇನ್‍ಸ್ಪೆಕ್ಟರ್ ಆಗಿರುವ ಇಂತೇಸರ್ ಅಲಿ ಎಂಬವರನ್ನು ಅಮಾನತುಗೊಳಿಸಲಾಗಿದೆ. ಗಡ್ಡ ಬೋಳಿಸುವಂತೆ ಇಲ್ಲವೇ ಗಡ್ಡ ಬೆಳೆಸಲು ಅಗತ್ಯ ಅನುಮತಿ ಪಡೆಯುವಂತೆ ಅಲಿಗೆ ಮೂರು ಬಾರಿ ಎಚ್ಚರಿಕೆ ನೀಡಲಾಗಿತ್ತು ಎಂದು ತಿಳಿದು ಬಂದಿದೆ.

"ಪೊಲೀಸ್ ನಿಯಮಗಳ ಪ್ರಕಾರ ಸಿಖ್ಖರು ಮಾತ್ರ ಗಡ್ಡ ಬೆಳೆಸಬಹುದಾಗಿದ್ದು ಉಳಿದ ಪೊಲೀಸ್ ಸಿಬ್ಬಂದಿ ಗಡ್ಡ ಇರಿಸುವಂತಿಲ್ಲ,'' ಎಂದು ಎಸ್‍ಪಿ  ಅಭಿಷೇಕ್ ಸಿಂಗ್ ಹೇಳಿದ್ದಾರೆ. "ಯಾವುದೇ ಪೊಲೀಸ್ ಸಿಬ್ಬಂದಿ ಗಡ್ಡ ಬೆಳೆಸಬೇಕಿದ್ದರೆ ಅನುಮತಿ ಪಡೆಯಬೇಕು ಆದರೆ ಇಂತೇಸರ್ ಅಲಿಗೆ ಈ ಕುರಿತು ಸತತ ಎಚ್ಚರಿಕೆ ನೀಡಿದ್ದರೂ ಅನುಮತಿ ಪಡೆದಿರಲಿಲ್ಲ,'' ಎಂದು ಅವರು ಹೇಳಿದ್ದಾರೆ.

ಆಲಿ ಕಳೆದ ಮೂರು ವರ್ಷಗಳಿಂದ ಬಾಘ್ಪತ್ ಎಂಬಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಾವು ಅನುಮತಿ ಕೋರಿ ಇಲಾಖೆಗೆ ಪತ್ರ ಬರೆದಿದ್ದರೂ ಅದಕ್ಕೆ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News