ಮುಂಬೈ ಮಾಲ್‌ನಲ್ಲಿ ಬೆಂಕಿ: 3,500 ನಿವಾಸಿಗಳ ಸ್ಥಳಾಂತರ

Update: 2020-10-23 04:43 GMT

 ಮುಂಬೈ: ಮಧ್ಯೆ ಮುಂಬೈನ ನಾಗ್ಪಾಡದಲ್ಲಿರುವ ಸಿಟಿ ಸೆಂಟರ್ ಮಾಲ್‌ನಲ್ಲಿ ಗುರುವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಸುರಕ್ಷತೆಯ ಕ್ರಮವಾಗಿ ಮಾಲ್‌ನ ಪಕ್ಕದಲ್ಲಿರುವ 55 ಅಂತಸ್ತಿನ ಕಟ್ಟಡದಲ್ಲಿ ವಾಸವಿರುವ ಸುಮಾರು 3,500 ನಿವಾಸಿಗಳನ್ನು ಹತ್ತಿರದ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿಯನ್ನು ನಂದಿಸುವ ಪ್ರಯತ್ನ ಶುಕ್ರವಾರ ಬೆಳಗ್ಗಿನ ತನಕ ಮುಂದುವರಿದಿದ್ದು, ಬೆಂಕಿಗೆ ಕಾರಣ ಏನೆಂದು ತನಿಖೆ ನಡೆಸಲಾಗುತ್ತಿದೆ. ಘಟನೆಯಲ್ಲಿ ಯಾವ ನಾಗರಿಕರಿಗೂ ಗಾಯವಾಗಿಲ್ಲ. ಬೆಂಕಿಯನ್ನು ನಿಯಂತ್ರಿಸುವ ವೇಳೆ ಅಗ್ನಿಶಾಮಕದ ದಳದ ಇಬ್ಬರು ಸಿಬ್ಬಂದಿಗೆ ಗಾಯವಾಗಿದೆ. ಮಾಲ್‌ನ ಎರಡನೇ ಹಾಗೂ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News