ಉಮರ್ ಖಾಲಿದ್‌ಗೆ ಜೈಲಿನ ಸೆಲ್‌ನಿಂದ ಹೊರಬರಲು ಅವಕಾಶ ನೀಡಿ: ತಿಹಾರ್ ಜೈಲು ಅಧಿಕಾರಿಗೆ ನ್ಯಾಯಾಲಯ ಆದೇಶ

Update: 2020-10-24 09:08 GMT

ಹೊಸದಿಲ್ಲಿ: ಜವಾಹರ್‌ಲಾಲ್ ನೆಹರೂ ವಿಶ್ವ ವಿದ್ಯಾಲಯದ ಮಾಜಿ ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್‌ಗೆ ಜೈಲಿನ ಸೆಲ್‌ನಿಂದ ಹೊರಬರಲು ಅವಕಾಶ ನೀಡಬೇಕೆಂದು ದಿಲ್ಲಿ ನ್ಯಾಯಾಲಯವು ತಿಹಾರ್ ಜೈಲು ಅಧಿಕಾರಿಗಳಿಗೆ ಶುಕ್ರವಾರ ನಿರ್ದೇಶನ ನೀಡಿದೆ. ಆದಾಗ್ಯೂ ಖಾಲಿದ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ನವೆಂಬರ್ 20ರ ವರೆೆಗೆ ವಿಸ್ತರಿಸಿತು.

ಫೆಬ್ರವರಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಭುಗಿಲೆದ್ದ ಭಾರೀ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿ ಖಾಲಿದ್ ಅವರು ಕಾನೂನು ಬಾಹಿರ ಚಟುವಟಿಕೆಗಳ(ತಡೆ) ಕಾಯ್ದೆ ಅಡಿ ಜೈಲಿನಲ್ಲಿದ್ದಾರೆ.

ತನಗೆ ಜೈಲಿನ ಸೆಲ್‌ನಿಂದ ಹೊರಬರಲು ಅಥವಾ ಯಾರೊಂದಿಗೂ ಮಾತನಾಡಲು ಅವಕಾಶ ನೀಡುತ್ತಿಲ್ಲ. ಇದು ಒಂದು ರೀತಿಯ ಏಕಾಂತದ ಬಂಧನವಾಗಿದೆ ಎಂದು ನ್ಯಾಯಾಲಯಕ್ಕೆ ಖಾಲಿದ್ ಗುರುವಾರ ದೂರು ನೀಡಿದ್ದರು. ಆಗ ನ್ಯಾಯಾಲಯವು ತಿಹಾರ್ ಜೈಲು ಅಧೀಕ್ಷಕ ಅವದೇಶ್ವರ ಕಾಂತ್ ಅವರನ್ನು ಕರೆಸಿಕೊಂಡಿತ್ತು. ಖಾಲಿದ್ ಅವರನ್ನು ಅವರ ಸೆಲ್‌ಗೆ ಸೀಮಿತಗೊಳಿಸಲಾಗಿದೆ ಎಂಬ ಆರೋಪವನ್ನು ಕಾಂತ್ ನಿರಾಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News