ಹತ್ರಸ್ ಘಟನೆಯ ವಿಶೇಷ ತನಿಖಾ ತಂಡದ ಡಿಐಜಿ ಪತ್ನಿ ಆತ್ಮಹತ್ಯೆ

Update: 2020-10-24 13:06 GMT

ಲಕ್ನೊ: ದೇಶಾದ್ಯಂತ ಹೊಸ ಸಂಚಲನ ಮೂಡಿಸಿರುವ ಹತ್ರಸ್ ಘಟನೆಯ ತನಿಖೆಗಾಗಿ ಉತ್ತರಪ್ರದೇಶ ಸರಕಾರ ನೇಮಿಸಿರುವ ವಿಶೇಷ ತನಿಖಾ ತಂಡ(ಸಿಟ್)ದ ಸದಸ್ಯರಾಗಿರುವ, ಉನ್ನಾವೊ ಪೊಲೀಸ್ ತರಬೇತಿ ಶಾಲೆಯಲ್ಲಿ ನಿಯುಕ್ತಿಗೊಂಡಿರುವ ಪೊಲೀಸ್ ಮಹಾನಿರ್ದೇಶಕ(ಡಿಐಜಿ)ಚಂದ್ರ ಪ್ರಕಾಶ್ ಅವರ ಪತ್ನಿ ಪುಷ್ಪಾ ಪ್ರಕಾಶ್ (36 ವರ್ಷ)ಸುಶಾಂತ್ ಗಾಲ್ಫ್ ಸಿಟಿಯಲ್ಲಿನ ತಮ್ಮ ನಿವಾಸದಲ್ಲಿ ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪುಷ್ಪಾ ಅವರು 13, 11 ಹಾಗೂ 7 ವಯಸ್ಸಿನ ಮೂವರು ಪುತ್ರಿಯರೊಂದಿಗೆ ಲಕ್ನೊದಲ್ಲಿ ವಾಸವಾಗಿದ್ದರು. 

ಪ್ರಾಥಮಿಕ ಮಾಹಿತಿಯ ಪ್ರಕಾರ, ಬೆಳಗ್ಗೆ 11ರ ಸುಮಾರಿಗೆ ಪುಷ್ಪಾ ಪ್ರಕಾಶ್ ತನ್ನ ಮನೆಯ ಕೊಠಡಿಯ ಬಾಗಿಲು ಚಿಲಕ ಹಾಕಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ದಕ್ಷಿಣ ವಲಯದ ಹೆಚ್ಚುವರಿ ಪೊಲೀಸ್ ಉಪಾಯುಕ್ತ ಸುರೇಶ್ ಚಂದ್ರ ರಾವತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News