ಅಬಕಾರಿ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ: 4 ಲಕ್ಷ ರೂ. ಮೌಲ್ಯದ ಗಾಂಜಾ ವಶ

Update: 2020-10-24 14:10 GMT

ಬಳ್ಳಾರಿ, ಅ.24: ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡವು ಸಿರುಗುಪ್ಪ ತಾಲೂಕಿನ ಹಾಳಮುರವಣಿ ಗ್ರಾಮದ ಹೊಲವೊಂದರಲ್ಲಿ ಶುಕ್ರವಾರ ದಾಳಿ ನಡೆಸಿ ಬೆಳೆದಿದ್ದ 4 ಲಕ್ಷ ರೂ.ಮೌಲ್ಯದ ಗಾಂಜಾ ಬೆಳೆ ವಶಪಡಿಸಿಕೊಂಡಿದೆ. ಸಾಗುವಳಿ ಮಾಡುತ್ತಿದ್ದ ರೈತನ ಮೇಲೆ ಸಿರಗುಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹಾಳಮುರವಣಿ ಸೀಮೆಯ ಸರ್ವೆ ನಂ-37/ಬಿ/2ರ ಮಾಲಕ ಕಾಳಪ್ಪ ದೊಡ್ಡ ಈರಣ್ಣ ಸಾಗುವಳಿ ಮಾಡುತ್ತಿರುವ ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ ಒಟ್ಟು 31.700ಕಿ.ಗ್ರಾಂ ಗಾಂಜಾ (54 ಗಿಡಗಳು) ವಶಪಡಿಸಿಕೊಳ್ಳಲಾಗಿದೆ.

ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದ ಮೇರೆಗೆ ಮತ್ತು ಬಳ್ಳಾರಿ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕ ಬಿ.ಎಚ್.ಪೂಜಾರ್ ನೇತೃತ್ವದಲ್ಲಿ ಹಾಗೂ ಸಿರಗುಪ್ಪ ತಹಶೀಲ್ದಾರ್ ಕೂಡಲಗಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ದಾಳಿ ನಡೆಸಿ ಬೆಳೆದಿದ್ದ ಗಾಂಜಾ ಬೆಳೆ ವಶಪಡಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News