ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಬೃಹತ್ ಸಮಾವೇಶ: ಸಚಿವ ಈಶ್ವರಪ್ಪ

Update: 2020-10-24 17:09 GMT

ದಾವಣಗೆರೆ, ಅ.24: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ಹಾವೇರಿ ಜಿಲ್ಲೆಯ ಕಾಗಿನೆಲೆಯಿಂದ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಜನವರಿ 15 ರಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಳ್ಳುವರು ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. 

ಹರಿಹರ ತಾಲೂಕಿನ ಬೆಳ್ಳೂಡಿಯ ಕಾಗಿನೆಲೆ ಗುರುಪೀಠದ ಶಾಖಾ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾದಯಾತ್ರೆಗೂ ಮುನ್ನ ರಾಜ್ಯದ ನಾಲ್ಕು ಕಡೆ ಸಮಾವೇಶ ನಡೆಯಲಿದೆ. ನವೆಂಬರ್ 8ಕ್ಕೆ ಹಾವೇರಿಯ ಕಾಗಿನೆಲೆಯಲ್ಲಿ ಬೃಹತ್ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಮಹಿಳೆಯರು ಇದರಲ್ಲಿ ಭಾಗವಹಿಸಬೇಕು. ನಾಲ್ಕು ವಿಭಾಗಗಳಾದ ದಾವಣಗೆರೆ, ಗುಲ್ಬರ್ಗ, ಮೈಸೂರು, ಬಾಗಲಕೋಟೆಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕೊನೆಗೆ ಬೆಂಗಳೂರಿನಲ್ಲಿ ಫೆಬ್ರುವರಿ 7ರಂದು ಬೃಹತ್ ಸಮಾವೇಶ ಆಯೋಜಿಲಾಗಿದೆ. 10 ಲಕ್ಷಕ್ಕೂ ಹೆಚ್ಚು ಜನರು ಸೇರುವ ನೀರಿಕ್ಷೆಯಿದೆ. ಎಂದು ಮಾಹಿತಿ ನೀಡಿದರು. 

ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗವಿಲ್ಲ, ಶಿಕ್ಷಣ, ತಿನ್ನುವುದಕ್ಕೆ ಅನ್ನವಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ಹಕ್ಕುಗಳನ್ನು ಪಡೆಯಲು ಹಾಗೂ ಸಮಾಜದ ಸಂಘಟನೆ ದೃಷ್ಠಿಯಿಂದ ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ಗುಲ್ಬರ್ಗ, ಬೀದರ್, ರಾಯಚೂರು, ಮಡಿಕೇರಿಗಳಲ್ಲಿ ಎಸ್ಟಿ ಪ್ರಮಾಣ ಪ್ರಮಾಣ ಪತ್ರ ನೀಡಿದ್ದಾರೆ. ಈಗಾಗಲೇ ಈ ಸಂಬಂಧ ಅಧ್ಯಯನ ನಡೆಯುತ್ತಿದೆ. ವರದಿ ಬಂದ ನಂತರ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದರು ಹೇಳಿದರು.  

ಮುಖಂಡ ಎಚ್.ಎಂ ರೇವಣ್ಣ ಮಾತನಾಡಿ, ನಮ್ಮ ಹಕ್ಕು ಪಡೆಯಲು ಈ ಹೋರಾಟ ಹಮ್ಮಿಕೊಂಡಿದ್ದೇವೆ. ಯಾವುದೇ ಸಮುದಾಯದ ವಿರುದ್ಧವಲ್ಲ. ಜನಸಂಖ್ಯೆಗೆ ಅನುಗುಣವಾಗಿ ನಮಗೆ ಸಿಗಬೇಕಾದ ಹಕ್ಕು ನೀಡಬೇಕು. ಪಕ್ಷಾತೀತವಾಗಿ ಈ ಹೋರಾಟ ನಡೆಯುತ್ತಿದೆ. ಸ್ವಾತಂತ್ರ ಪೂರ್ವದಿಂದಲೂ ನಮ್ಮ ಹೋರಾಟ ನಡೆಯುತ್ತಿದೆ. ಯಾರು ಆತಂಕ ಪಡುವ ಅಗತ್ಯವಿಲ್ಲ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬಹುದು ಎಂದರು.    

ಮಕರ ಸಂಕ್ರಾತಿ ನಂತರ ಕುರುಬರ ದಿಕ್ಕು ಬದಲು  
ಎಸ್ಟಿಗೆ ಸೇರ್ಪಡೆ ಸಂಬಂಧ ಇದೇ ತಿಂಗಳು 11 ರಂದು ಅರಮನೆ ಮೈದಾನಲ್ಲಿ ಜನಪ್ರತಿನಿಧಿಗಳ ಚಿಂತನ ಸಭೆ ಮಾಡಲಾಗಿತ್ತು. ಅದರಂತೆ ಈ ಹೋರಾಟದಲ್ಲಿ ಮಹಿಳೆಯರನ್ನು ಭಾಗವಹಿಸುವ ನಿಟ್ಟಿನಲ್ಲಿ ಸಮಿತಿ ಮಾಡಲಾಗಿದೆ. ಅದರಂತೆ ನವೆಂಬರ 8 ರಂದು ಮಹಿಳಾ ಸಮಿತಿಯಿಂದ ರಾಜ್ಯ ಸಮಾವೇಶ ನಡೆಯಲಿದೆ ಎಂದರು.  
-ಕಾಗಿನಲೆ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News