ಸ್ಮಿತ್ ಬಿಗ್ ಬ್ಯಾಷ್‌ನಲ್ಲಿ ಆಡುವ ಸಾಧ್ಯತೆ ಇಲ್ಲ

Update: 2020-10-30 18:44 GMT

ಮೆಲ್ಬೋರ್ನ್: ಜೈವಿಕ ಸುರಕ್ಷಿತ ವಾತಾವರಣದಲ್ಲಿ ಹೆಚ್ಚು ಸಮಯ ಕಳೆಯುವುದನ್ನು ತಪ್ಪಿಸಲು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಮುಂಬರುವ ಬಿಗ್ ಬ್ಯಾಷ್ ಲೀಗ್‌ನಿಂದ ಹೊರಗುಳಿಯಲಿದಿದ್ದಾರೆ.

 ಆಸ್ಟ್ರೇಲಿಯದ ಸ್ಟಾರ್ ಕ್ರಿಕೆಟಿಗರು ಆಗಸ್ಟ್‌ನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಂದಿನಿಂದ ಜೈವಿಕ ಸುರಕ್ಷಿತ ವಾತಾವರಣದಲ್ಲಿದ್ದಾರೆ.

 ‘‘ನಾನು ನಿಮ್ಮಂದಿಗೆ ಪ್ರಾಮಾಣಿಕವಾಗಿ ಹೇಳುತ್ತೇನೆ. ಖಂಡಿತವಾಗಿಯೂ ಬಿ ಬ್ಯಾಷ್‌ನಲ್ಲಿ ನಾನು ಆಡುವ ಅವಕಾಶವಿಲ್ಲ’’ ಎಂದು ಸ್ಮಿತ್ ಸುದ್ದಿ ಸಂಸ್ಥೆ ಪ್ರತಿನಿಧಿಗೆ ತಿಳಿಸಿದ್ದಾರೆ. ಆಗಸ್ಟ್‌ನಿಂದ ಮನೆಯಿಂದ ದೂರವಿರುವ ಆಟಗಾರರ ಮೇಲಿನ ಮಾನಸಿಕ ಒತ್ತಡದ ಬಗ್ಗೆ ವಿವರಿಸಿದರು.

ಸ್ಮಿತ್ ಅವರ ಸಹೋದ್ಯೋಗಿಗಳಾದ ಡೇವಿಡ್ ವಾರ್ನರ್ ಮತ್ತು ಪ್ಯಾಟ್ ಕಮಿನ್ಸ್ ಕೂಡ ಈ ವರ್ಷದ ಬಿಬಿಎಲ್‌ನ್ನು ಕಳೆದುಕೊಳ್ಳುವ ನಿರೀಕ್ಷೆಯಿದೆ.

  ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕನಾಗಿರುವ ಸ್ಮಿತ್ ಅವರು ಜೈವಿಕ ಸುರಕ್ಷಿತ ವಲಯದ ದುಷ್ಪರಿಣಾಮವನ್ನು ಪರಿಗಣಿಸಿ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಇದರಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಸಮಯದವರೆಗೆ ಕುಟುಂಬದಿಂದ ದೂರವಿರುವುದು ಸೇರಿದೆ ಎಂದರು. ಜೈವಿಕ ಗುಳ್ಳೆಯೊಳಗಿನ ಜೀವನಕ್ಕೆ ಸಂಬಂಧಿಸಿದ ಮಾನಸಿಕ ಆಘಾತದಿಂದ ಹೊರಬರಲು ಆಟಗಾರರರು ಸಾಮಾನ್ಯವಾಗಿ ಸ್ವಲ್ಪ ಸಮಯವನ್ನು ಕಳೆಯಬೇಕಾಗುತ್ತದೆ ಎಂದು ಸ್ಮಿತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News