ಬಿಜೆಪಿಯ ಉಚಿತ ಕೋವಿಡ್ ಲಸಿಕೆ ಆಶ್ವಾಸನೆ ನೀತಿ ಸಂಹಿತೆ ಉಲ್ಲಂಘನೆಯಲ್ಲ ಎಂದ ಚುನಾವಣಾ ಆಯೋಗ

Update: 2020-10-31 10:48 GMT

ಹೊಸದಿಲ್ಲಿ: ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ಬಿಡುಗಡೆಗೊಳಿಸಿರುವ ಪ್ರಣಾಳಿಕೆಯಲ್ಲಿ ಪಕ್ಷವು ರಾಜ್ಯದ ಎಲ್ಲರಿಗೂ ಉಚಿತ ಕೊರೋನವೈರಸ್ ಲಸಿಕೆಯ ಆಶ್ವಾಸನೆ ನೀಡಿರುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

ಮಾಹಿತಿ ಹಕ್ಕು ಕಾರ್ಯಕರ್ತ ಸಾಕೇತ್ ಗೋಖಲೆ ಅವರು ಸಲ್ಲಿಸಿದ್ದ ದೂರಿಗೆ ಪ್ರತಿಕ್ರಿಯೆಯಾಗಿ ಆಯೋಗ ಮೇಲಿನಂತೆ ಹೇಳಿದೆ. ಸರಕಾರ ತನ್ನ ಲಸಿಕೆ ನೀತಿಯನ್ನು ಇನ್ನೂ ಘೋಷಿಸದೇ ಇರುವುದರಿಂದ ಬಿಜೆಪಿಯ ಆಶ್ವಾಸನೆ ಮತದಾರರನ್ನು ತಪ್ಪು ದಾರಿಗೆಳೆಯುವ ಯತ್ನವಾಗಿದೆ ಎಂದು ಸಾಕೇತ್ ತಮ್ಮ ದೂರಿನಲ್ಲಿ ಆರೋಪಿಸಿದ್ದರು.

ಮಾದರಿ ನೀತಿ ಸಂಹಿತೆಯ ಮೂರು ಅಂಶಗಳನ್ನು ಉಲ್ಲೇಖಿಸಿ ಆಯೋಗ ಬಿಜೆಪಿಗೆ ಕ್ಲೀನ್ ಚಿಟ್ ನೀಡಿದೆ. "ಸಂವಿಧಾನಕ್ಕೆ ವಿರೋಧವಾಗಿರುವುದು ಏನೂ ರಾಜ್ಯ ಚುನಾವಣಾ ಪ್ರಣಾಳಿಕೆಯಲ್ಲಿ ಇರಬಾರದು,. ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆಗೆ ಧಕ್ಕೆ ತರುವ ಆಸ್ವಾಸನೆಗಳಿರಬಾರದು ಹಾಗೂ ಮತದಾರರ ಮೇಲೆ ಅನಗತ್ಯ ಪ್ರಬಾವ ಬೀರುವಂತಹ  ಆಸ್ವಾನೆಗಳಿರಬಾರದು ಮತ್ತು ಪ್ರಣಾಳಿಕೆಯಲ್ಲಿನ ಭರವಸೆಗಳ ಹಿಂದಿನ ತರ್ಕವನ್ನು ಪ್ರತಿಫಲಿಸಬೇಕು'' ಎಂಬ ಅಂಶಗಳನ್ನು ಎತ್ತಿ ತೋರಿಸಿದ ಆಯೋಗ ಈ ಹಿನ್ನೆಲೆಯಲ್ಲಿ ಬಿಜೆಪಿಯ ಆಶ್ವಾಸನೆ ನೀತಿ ಸಂಹಿತೆಯ ಉಲ್ಲಂಘನೆಯಾಗುವುದಿಲ್ಲ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News