ಶಿಕ್ಷಕಿಗೆ ಹೋಂವರ್ಕ್ ತೋರಿಸಲು 35 ಕಿ.ಮೀ ಪ್ರಯಾಣಿಸಿದ 8 ವರ್ಷದ ಬಾಲಕ

Update: 2020-10-31 12:34 GMT

ಧಾರವಾಡ, ಅ.31: ಶಿಕ್ಷಕಿ ನೀಡಿದ ಹೋಂ ವರ್ಕ್ ತೋರಿಸಲು 8 ವರ್ಷದ ಬಾಲಕನೊಬ್ಬ 35 ಕಿ.ಮೀ. ಪ್ರಯಾಣ ಮಾಡಿದ ಅಚ್ಚರಿಯ ಸಂಗತಿ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿಬೂದಿಹಾಳದಲ್ಲಿ ನಡೆದಿದೆ.

ಎರಡನೇ ತರಗತಿ ಓದುತ್ತಿರುವ ಪವನ್ ಕಂಠಿ ಎಂಬ ವಿದ್ಯಾರ್ಥಿ ಯರಿಬೂದಿಹಾಳದಿಂದ ಹುಬ್ಬಳ್ಳಿಗೆ ಸುಮಾರು 35 ಕಿ.ಮೀ. ಪ್ರಯಾಣಿಸಿ ತನ್ನ ಶಿಕ್ಷಕಿಗೆ ಹೋಂ ವರ್ಕ್ ತೋರಿಸಿ ಬಂದಿದ್ದಾನೆ.

ಪವನ್‍ಗೆ ಆನ್‍ಲೈನ್ ಕ್ಲಾಸ್ ಸೌಲಭ್ಯವಿಲ್ಲದ ಹಿನ್ನೆಲೆಯಲ್ಲಿ ಆತ ತನ್ನ ತಾಯಿ ಜೊತೆ ನೇರವಾಗಿ ಬಂದು ತನ್ನ ಶಿಕ್ಷಕಿ ಅನುಸೂಯಾ ಸಜ್ಜನ್‍ಗೆ ಹೋಂ ವರ್ಕ್ ತೋರಿಸಿದ್ದಾನೆ.

ಪವನ್ ಈ ಹಿಂದೆ ಹುಬ್ಬಳ್ಳಿಯ ವಸತಿ ನಿಲಯದಲ್ಲಿದ್ದುಕೊಂಡು ವಿದ್ಯಾಭ್ಯಾಸ ನಡೆಸುತ್ತಿದ್ದ. ಕೊರೋನ ಹಿನ್ನೆಲೆ ತನ್ನ ತಂದೆ ತಾಯಿ ಜೊತೆ ವಾಸವಿದ್ದಾನೆ. ಕಳೆದ ತಿಂಗಳು ತಾಯಿ ಜೊತೆ ಶಾಲೆಗೆ ಬಂದು ಶಿಕ್ಷಕಿ ಅನುಸೂಯಾ ಸಜ್ಜನ್‍ರನ್ನು ಭೇಟಿಯಾದ ಪವನ್‍ಗೆ ಮತ್ತೆ ಒಂದು ತಿಂಗಳಿಗಾಗುವಷ್ಟು ಪಾಠ ಮತ್ತು ಹೋಂ ವರ್ಕ್ ನೀಡಿ ಕಳುಹಿಸಿದ್ದರು.

ಹೋಂ ವರ್ಕ್ ಎಲ್ಲವನ್ನೂ ಮುಗಿಸಿದ್ದ ಪವನ್ ತನ್ನ ತಾಯಿ ಜೊತೆ ಹಠ ಹಿಡಿದು ಹೋಂ ವರ್ಕ್ ತೋರಿಸಲು ಹುಬ್ಬಳ್ಳಿಗೆ ಬಂದಿದ್ದಾನೆ. ಬಾಲಕನ ವಿದ್ಯಾಸಕ್ತಿಗೆ ಅವನ ಶಿಕ್ಷಕಿ ಮೆಚ್ಚುಗೆ ವ್ಯಕ್ತಪಡಿಸಿದ್ದು ವಿದ್ಯಾರ್ಥಿಗೆ ನೋಟ್‍ಬುಕ್ ಮತ್ತು ಪುಸ್ತಕ ನೀಡಿ ಕಳುಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News