ಮೀಡಿಯಾ ಅವಾರ್ಡ್-2020ಕ್ಕೆ ಅರ್ಜಿ ಆಹ್ವಾನ

Update: 2020-10-31 14:51 GMT

ಬೆಂಗಳೂರು, ಅ.31: ಚುನಾವಣಾ ಆಯೋಗದ ವತಿಯಿಂದ ಚುನಾವಣೆಗೆ ಸಂಬಂಧಿಸಿದಂತೆ ಮತದಾರರಿಗೆ ಶಿಕ್ಷಣ ಮತ್ತು ಅರಿವು ಮೂಡಿಸುವಲ್ಲಿ ಅತ್ಯುತ್ತಮ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡ ಮಾಧ್ಯಮಗಳಿಗೆ ಮೀಡಿಯಾ ಅವಾರ್ಡ್ 2020ಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಪತ್ರಿಕಾ ಮಾಧ್ಯಮ, ಎಲೆಕ್ಟ್ರಾನಿಕ್(ಟೆಲೆವಿಷನ್) ಮಾಧ್ಯಮ, ಎಲೆಕ್ಟ್ರಾನಿಕ್ ರೇಡಿಯೋ ಹಾಗೂ ಸಾಮಾಜಿಕ ಜಾಲತಾಣ ಮಾಧ್ಯಮ ಸೇರಿ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಆಸಕ್ತ ರಾಜ್ಯದ ಎಲ್ಲ ಮಾಧ್ಯಮ ಸಂಸ್ಥೆಗಳು ಭಾಗವಹಿಸುವಂತೆ ಹಾಗೂ ನೇರವಾಗಿ ಭಾರತ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಬಹುದಾಗಿರುತ್ತದೆ ಎಂದು ಚುನಾವಣಾ ಆಯೋಗದ ರಾಜ್ಯ ನೋಡಲ್ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News