ನಿರ್ಬಂಧಗಳು ಕುಟುಂಬದ ಸದಸ್ಯರಿಗೆ ವಿಸ್ತರಣೆ ಪ್ರಜಾಪ್ರಭುತ್ವ ವಿರೋಧಿ: ಬಂಡಾಯ ಸಾಹಿತ್ಯ ಸಂಘಟನೆ

Update: 2020-10-31 16:11 GMT

ಬೆಂಗಳೂರು, ಅ.31: ಸೇವಾ ನಿಯಮದಲ್ಲಿ ಸರಕಾರಿ ನೌಕರರಿಗೆ ಇರುವ ನಿರ್ಬಂಧಗಳನ್ನು ಅವರ ಕುಟುಂಬ ಸದಸ್ಯರಿಗೂ ವಿಸ್ತರಿಸುವ ಪ್ರಸ್ತಾಪ ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಬಂಡಾಯ ಸಾಹಿತ್ಯ ಸಂಘಟನೆ ಪ್ರತಿಪಾದಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಬಂಡಾಯ ಸಾಹಿತ್ಯ ಸಂಘಟನೆಯ ಬರಗೂರು ರಾಮಚಂದ್ರಪ್ಪ, ಕರ್ನಾಟಕ ನಾಗರಿಕ ಸೇವಾ ನಿಯಮ ಎಂದರೆ ಸರಕಾರಿ ನೌಕರರ ಪಾಲಿಗೆ ಮಿನಿ ಸಂವಿಧಾನ ಇದ್ದಂತೆ. ಅವುಗಳಿಗೆ ತಿದ್ದುಪಡಿ ತರುವಾಗ ಮೂಲ ಸಂವಿಧಾನದ ಆಶಯಗಳನ್ನು ಮೀರಬಾರದು. ನಿರ್ಬಂಧಗಳ ಹೆಸರಿನಲ್ಲಿ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಬಾರದು ಎಂದು ತಿಳಿಸಿದ್ದಾರೆ.

ಅಭಿನಯ ಮತ್ತು ಸಾಹಿತ್ಯಾಭಿವ್ಯಕ್ತಿಗೆ ಸರಕಾರಿ ನೌಕರರು ಅನುಮತಿ ಪಡೆಯಬೇಕು ಎಂಬ ಕೆಲವು ನಿಯಮಗಳು ಹಿಂದೆಯೇ ಇದ್ದವು. ಲಾಭದಾಯಕ ವೃತ್ತಿಗೆ ನಿರ್ಬಂಧ ವಿಧಿಸುವುದು ಸರಿ. ಆದರೆ, ಸೃಜನಶೀಲ ಅಭಿವ್ಯಕ್ತಿಗೆ ಅನಪೇಕ್ಷಿತ ಅಡ್ಡಿ ತರುವುದು ಸರಿಯಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News