ಶಿಕ್ಷಕರ ವರ್ಗಾವಣೆಗೆ ಅಗತ್ಯ ದಾಖಲೆಗಳ ಸಿದ್ಧತೆಗೆ ಅವಕಾಶ

Update: 2020-11-08 13:33 GMT

ಬೆಂಗಳೂರು, ನ. 8: ಶಿಕ್ಷಣ ಇಲಾಖೆ ವತಿಯಿಂದ 2020-21ನೆ ಸಾಲಿಗೆ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಸಂಬಂಧ ಎಎಡಿಎಸ್ ತಂತ್ರಾಂಶದಲ್ಲಿ ಶಿಕ್ಷಕರ ಮಾಹಿತಿಗಳು ತಪ್ಪಾಗಿದ್ದಲ್ಲಿ ಉಪನಿರ್ದೇಶಕರ ಲಾಗಿನ್‍ನಲ್ಲಿ ನ.11ರೊಳಗೆ ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಮಾಹಿತಿ ತಪ್ಪಾಗಿರುವ ಶಿಕ್ಷಕರು ಸೂಕ್ತ ದಾಖಲೆಗಳೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಬಹುದಾಗಿದೆ. ವರ್ಗಾವಣೆಗಾಗಿ ಆದ್ಯತೆ ಕೋರುವ ಶಿಕ್ಷಕರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಳ್ಳಬಹುದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News