ಕೆಎಸ್ಆರ್‌ಟಿಸಿಯಲ್ಲಿ ಕೆಲಸ ಕೊಡಿಸುವ ಆಮಿಷ: ಆರೋಪಿಗಳ ಬಗ್ಗೆ ಮಾಹಿತಿಗೆ ಮನವಿ

Update: 2020-11-11 13:49 GMT

ಬೆಂಗಳೂರು, ನ.11: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ನಿಗಮದಲ್ಲಿ ಯಾವುದೇ ಹುದ್ದೆಯನ್ನು ಕೊಡಿಸುವುದಾಗಿ ಯಾರಾದರೂ ಆಮೀಷವೊಡ್ಡಿದಲ್ಲಿ ಕೂಡಲೇ ದೂ.77609-90051 ಮತ್ತು 77609-90095ಕ್ಕೆ ಸಂಪರ್ಕಿಸಿ ಮಾಹಿತಿಯನ್ನು ನೀಡಲು ತಿಳಿಸಲಾಗಿದೆ.

ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ ಸಂಸ್ಥೆಯು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಸಹಾಯಕ ಸಂಚಾರ ನಿರೀಕ್ಷಕ ಹುದ್ದೆಗೆ ನೇಮಕ ಮಾಡಿಸಿಕೊಡುವುದಾಗಿ ಹಲವು ಅಭ್ಯರ್ಥಿಗಳಿಂದ ನಿಗಮಕ್ಕೆ ಸಂಬಂಧಪಡದ ವ್ಯಕ್ತಿಗಳು ಹಣ ಪಡೆದಿರುವ ಬಗ್ಗೆ ನಿಗಮದ ಗಮನಕ್ಕೆ ಬಂದಿರುತ್ತದೆ.

ನಿಗಮದಲ್ಲಿ ಸಹಾಯಕ ಸಂಚಾರ ನಿರೀಕ್ಷಕ ಹುದ್ದೆಗಳಿಗೆ ಹೊರಡಿಸಿದಂತಹ ಜಾಹೀರಾತು ಸಂಖ್ಯೆ:1/2016 ರನ್ವಯ ನೇಮಕಾತಿಯು ಪೂರ್ಣಗೊಂಡಿದ್ದು, ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ನಿಗಮದ ವಿವಿಧ ವಿಭಾಗಗಳಲ್ಲಿ ತರಬೇತಿಗಾಗಿ ಈಗಾಗಲೇ ನಿಯೋಜನೆ ಮಾಡಲಾಗಿರುತ್ತದೆ.

ನಿಗಮದಲ್ಲಿ ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿಗೆ ಜಾಹೀರಾತು ಸಂಖ್ಯೆ:1/2018 ಅನ್ನು ಮತ್ತು ಕರಾಸಾ ಪೇದೆಗಳ ನೇಮಕಾತಿಗೆ ಜಾಹೀರಾತು ಸಂಖ್ಯೆ:2/2018 ಅನ್ನು ಹೊರಡಿಸಿದ್ದು, ದೇಶವ್ಯಾಪಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡಿರುವ ಹಿನ್ನೆಲೆಯಲ್ಲಿ ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿರುತ್ತದೆ. ಪ್ರಸ್ತುತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಯಾವುದೇ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿರುವುದಿಲ್ಲ.

ನಿಗಮದಲ್ಲಿ ನಡೆಯುವಂತಹ ಎಲ್ಲಾ ನೇಮಕಾತಿಗಳು ಹುದ್ದೆಗಳಿಗೆ ಅವಶ್ಯಕತೆ ಇರುವ ಅರ್ಹತೆಯನ್ನು ಹೊಂದಿರುವಂತಹ ಅಭ್ಯರ್ಥಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೇಮಕಾತಿಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನಿಗಮದ ವೆಬ್‍ಸೈಟ್ WWW.Ksrtcjobs.comನಲ್ಲಿ ಪ್ರಕಟಿಸಲಾಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News