ಹಾಂಕಾಂಗ್: 4 ಪ್ರಜಾಪ್ರಭುತ್ವ ಪರ ಸಂಸದರ ಅನರ್ಹತೆ

Update: 2020-11-11 16:33 GMT

ಹಾಂಕಾಂಗ್, ನ. 11: ಹಾಂಕಾಂಗ್‌ನ ನಾಲ್ವರು ಪ್ರಜಾಪ್ರಭುತ್ವ ಪರ ಸಂಸದರನ್ನು ಬುಧವಾರ ಅನರ್ಹಗೊಳಿಸಲಾಗಿದೆ. ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂಬುದಾಗಿ ಪರಿಗಣಿಸಲಾಗಿರುವ ರಾಜಕಾರಣಿಗಳನ್ನು ಅನರ್ಹಗೊಳಿಸುವ ಅಧಿಕಾರವನ್ನು ಚೀನಾವು ಹಾಂಕಾಂಗ್‌ಗೆ ನೀಡಿದ ತಕ್ಷಣ ಈ ಬೆಳವಣಿಗೆ ನಡೆದಿದೆ.

ತಮ್ಮ ಸಹೋದ್ಯೋಗಿಗಳನ್ನು ಅನರ್ಹಗೊಳಿಸಿದರೆ, ತಾವು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಹಾಂಕಾಂಗ್‌ನ 19 ಪ್ರಜಾಪ್ರಭುತ್ವ ಪರ ಸಂಸದರು ಸೋಮವಾರ ಎಚ್ಚರಿಕೆ ನೀಡಿದ ಬಳಿಕ, ಈ ನಾಲ್ವರನ್ನು ಅನರ್ಹಗೊಳಿಸಲಾಗಿದೆ.

ಈ ನಾಲ್ವರ ಅನರ್ಹತೆಯು ಹಾಂಕಾಂಗ್‌ನ ಪ್ರಜಾಪ್ರಭುತ್ವ ಚಳವಳಿಗೆ ದೊಡ್ಡ ಹೊಡೆತವಾಗಿದೆ. ಹಾಂಕಾಂಗ್‌ನಲ್ಲಿ ರಾಷ್ಟ್ರೀಯ ಭದ್ರತಾ ಕಾನೂನನ್ನು ಚೀನಾ ಹೇರಿದ ಬಳಿಕ, ಅಲ್ಲಿನ ಪ್ರಜಾಪ್ರಭುತ್ವ ಚಳವಳಿಯ ಮೇಲೆ ನಿರಂತರವಾಗಿ ಆಕ್ರಮಣ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News