ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ ಆರೋಪ: ಇಬ್ಬರು ಸಚಿವರು ಸೇರಿ ಮೂವರಿಗೆ ನೋಟಿಸ್

Update: 2020-11-12 16:34 GMT

ಬೆಂಗಳೂರು, ನ.12: ಆಸ್ತಿ ವಿವರ ಸಲ್ಲಿಸದ ಆರೋಪ ಸಂಬಂಧ ಇಬ್ಬರು ಸಚಿವರು ಸೇರಿ ಮೂವರಿಗೆ ಲೋಕಾಯುಕ್ತ ನೋಟಿಸ್ ನೀಡಿದೆ ಎಂದು ವರದಿಯಾಗಿದೆ.

ಸಮಾಜ ಕಲ್ಯಾಣ ಸಚಿವ ಶ್ರೀರಾಮಲು, ಆಹಾರ ಸಚಿವ ಗೋಪಾಲಯ್ಯ ಹಾಗೂ ಶಾಸಕಿ ಕೆ.ಪೂರ್ಣಿಮಾ ಅವರಿಗೆ ಆಸ್ತಿ ಪ್ರಮಾಣ ಪತ್ರ ಸಲ್ಲಿಸುವಂತೆ ಲೋಕಾಯುಕ್ತರು ನೆನಪಿನ ಪತ್ರ ಮಾದರಿಯಲ್ಲಿ ನೋಟಿಸ್ ನೀಡಿದ್ದು, 10 ದಿನದೊಳಗೆ ಆಸ್ತಿ ವಿವರ ಸಲ್ಲಿಸುವಂತೆ ಸೂಚಿಸಿದೆ.
ಪ್ರತಿವರ್ಷ ಜೂನ್ 30ರೊಳಗೆ ಆಸ್ತಿ ಪ್ರಮಾಣ ಪತ್ರ ಲೋಕಾಯುಕ್ತಕ್ಕೆ ನೀಡುವುದು ಕಡ್ಡಾಯ. ಆದರೂ ಜನಪ್ರತಿನಿಧಿಗಳು ಆಸ್ತಿ ಘೋಷಿಸದೆ ಕಾನೂನು ಉಲ್ಲಂಘಿಸಿದ್ದಾರೆ. 

ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್, ಆಸ್ತಿ ಘೋಷಿಸದ ಜನಪ್ರತಿನಿಧಿಗಳ ವಿರುದ್ಧ ಕೈಗೊಂಡ ಕ್ರಮ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಲೋಕಾಯುಕ್ತಕ್ಕೆ ಅರ್ಜಿ ಹಾಕಿದ್ದರು. ಇದರಂತೆ ಇಬ್ಬರು ಸಚಿವರು ಸೇರಿ ಮೂವರು ಜನಪ್ರತಿನಿಧಿಗಳಿಗೆ ಆಸ್ತಿ ವಿವರ ಸಲ್ಲಿಸುವಂತೆ ಈ ನೋಟಿಸ್ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News