ಹೊಸ ವರ್ಷಾಚರಣೆ ಸಂಭ್ರಮ ನಿರ್ಬಂಧಕ್ಕೆ ಸರಕಾರ ಚಿಂತನೆ

Update: 2020-11-13 18:03 GMT

ಬೆಂಗಳೂರು, ನ.13: ಮಾರಕ ಕೊರೋನ ರೋಗ ತಡೆಗಟ್ಟುವ ಉದ್ದೇಶದಿಂದ ಈ ಬಾರಿಯ ಹೊಸ ವರ್ಷಾಚರಣೆಯ ಮೋಜು-ಮಸ್ತಿ ಕೂಟಗಳಿಗೆ ನಿರ್ಬಂಧ ಹೇರಲು ಸರಕಾರ ಚಿಂತನೆ ನಡೆಸಿದೆ.

ಹೊಸ ವರ್ಷಾಚರಣೆ ಸಂಭ್ರಮಕ್ಕೆ ಸಂಬಂಧಿಸಿದಂತೆ ಪಾರ್ಟಿಗಳಿಗೆ ನಿಷೇಧ ಹೇರುವ ಸಂಬಂಧ ಸರಕಾರ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಾಗಿದೆ. ನಗರದಾದ್ಯಂತ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿ ಹಬ್ಬ ಆಚರಣೆಗೆ ಅವಕಾಶ ನೀಡಲಾಗಿದೆ. ಅದೇ ರೀತಿ ಹೊಸ ವರ್ಷದಂದು ಎಲ್ಲಿಯೂ ಪಾರ್ಟಿಗಳಿಗೆ ಅವಕಾಶ ನೀಡದೇ, ಇದ್ದಲ್ಲಿಂದಲೇ ಸಂಭ್ರಮಿಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಬೇಕು ಎಂದು ಸರಕಾರ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News