ಕೆಎಎಸ್ ಪರೀಕ್ಷೆ ಮುಂದೂಡಿಕೆ

Update: 2020-11-21 12:21 GMT

ಬೆಂಗಳೂರು, ನ.21: ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು ಏಕಕಾಲಕ್ಕೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಕೆಎಎಸ್ ಮುಖ್ಯ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಫೆ.13 ರಿಂದ 16 ರವರೆಗೆ ನಡೆಯಲಿದೆ.

ಆಯೋಗವು ಜ.2 ರಿಂದ 5 ರವರೆಗೆ ಮುಖ್ಯ ಪರೀಕ್ಷೆಗಳನ್ನು ನಿಗದಿ ಮಾಡಲಾಗಿದ್ದು, ಇದೇ ದಿನಾಂಕದಲ್ಲಿ ಕೇಂದ್ರ ಲೋಕಸೇವಾ ಆಯೋಗವೂ ಪರೀಕ್ಷೆಗಳಿಗೆ ದಿನಾಂಕವನ್ನು ನಿಗದಿ ಮಾಡಲಾಗಿತ್ತು. ಆದುದರಿಂದಾಗಿ ಕೆಎಎಸ್ ಮುಖ್ಯಪರೀಕ್ಷೆ  ಮುಂದೂಡುವಂತೆ ಅಭ್ಯರ್ಥಿಗಳು, ಪೋಷಕರು ಒತ್ತಾಯ ಮಾಡಲಾಗಿತ್ತು.

ಯುಪಿಎಸ್‍ಸಿ ನಾಲ್ಕು ತಿಂಗಳ ಹಿಂದೆಯೇ ವೇಳಾಪಟ್ಟಿ ಪ್ರಕಟಿಸಿ, 2021ರ ಜನವರಿ 8ರಿಂದ 17ವರೆಗೆ ನಿಗದಿಪಡಿಸಿತ್ತು. ಕೆಪಿಎಸ್ಸಿ ನ.7ರಂದು ತನ್ನ ವೇಳಾಪಟ್ಟಿ ಪ್ರಕಟಿಸಿ, ಜನವರಿ ಮೊದಲವಾರದಲ್ಲಿಯೇ ಪರೀಕ್ಷೆಯನ್ನು ನಿಗದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News