ಗುಂಡು ಹಾರಿಸುವ ದೃಶ್ಯ ಸಿಸಿಟಿವಿಯಲ್ಲಿ ದಾಖಲು: ದಿಲ್ಲಿ ಗಲಭೆ ಆರೋಪಿಗೆ ಜಾಮೀನು ನಿರಾಕರಣೆ

Update: 2020-11-22 18:27 GMT

ಹೊಸದಿಲ್ಲಿ, ನ. 22: ಸಿಸಿಟಿವಿಯಲ್ಲಿ ದಾಖಲಾದ ಈ ವರ್ಷ ಫೆಬ್ರವರಿಯ ಈಶಾನ್ಯ ದಿಲ್ಲಿ ಗಲಭೆಯ ದೃಶ್ಯಾವಳಿಗಳಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಜನರ ಮೇಲೆ ಗುಂಡು ಹಾರಿಸಿದ ಆರೋಪಿಗೆ ಜಾಮೀನು ನೀಡಲು ದಿಲ್ಲಿ ನ್ಯಾಯಾಲಯ ನಿರಾಕರಿಸಿದೆ.

ಆರೋಪಿ ವಿಕ್ರಮ್ ಸಿಂಗ್ ಜಾಮೀನು ಮನವಿಯನ್ನು ಶುಕ್ರವಾರ ತಿರಸ್ಕರಿಸಿರುವ ಹೆಚ್ಚುವರಿ ಸತ್ರ ನ್ಯಾಯಾಧೀಶ ಅಮಿತಾಭ್ ರಾವತ್, ಆರೋಪಿ ಗಲಭೆ ನಡೆಸಲು ಕಾನೂನು ಬಾಹಿರವಾಗಿ ಸೇರಿದ ಸಭೆಯ ಭಾಗವಾಗಿದ್ದರು.

ಅಲ್ಲದೆ ಹಿಂಸಾಚಾರದ ಸಂದರ್ಭ ಪೊಲೀಸ್ ಅಧಿಕಾರಿಗಳು ಹಾಗೂ ಜನರ ಮೇಲೆ ಗುಂಡು ಹಾರಿಸುವ ಮೂಲಕ ಗಾಯಗೊಳ್ಳಲು ಕಾರಣರಾಗಿದ್ದರು ಎಂದು ಹೇಳಿದರು. ಪ್ರಕರಣದ ವಾಸ್ತವ, ಪರಿಸ್ಥಿತಿ ಹಾಗೂ ಆರೋಪಿಯ ವಿರುದ್ಧದ ಸಾಕ್ಷ್ಯಗಳನ್ನು ಒಟ್ಟಾಗಿ ಪರಿಶೀಲಿಸಿದರೆ ಜಾಮೀನು ನೀಡಲು ಸಾಧ್ಯವಿಲ್ಲ. ಪ್ರಸ್ತುತ ವಿಕ್ರಮ್ ಸಿಂಗ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News