ಎಲ್‌ಪಿಎಲ್: ಗ್ಲಾಡಿಯೇಟರ್ಸ್‌ಗೆ ಅಫ್ರಿದಿ ನಾಯಕ

Update: 2020-11-22 18:35 GMT

ಹೊಸದಿಲ್ಲಿ: ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಅವರು ಶ್ರೀಲಂಕಾದ ಹಂಬನ್‌ಟೊಟಾದಲ್ಲಿ ನ.26ರಿಂದ ಡಿ.16ರ ತನಕ ನಡೆಯಲಿರುವ ಲಂಕಾ ಪ್ರೀಯರ್ ಲೀಗ್(ಎಲ್‌ಪಿಎಲ್)ನಲ್ಲಿ ಗ್ಯಾಲೆ ಗ್ಲಾಡಿಯೇಟರ್ಸ್ ತಂಡವನ್ನು ನಾಯಕರಾಗಿ ಮುನ್ನಡೆಸಲಿದ್ದಾರೆ.

ಕೋವಿಡ್ -19 ಕಾರಣದಿಂದಾಗಿ ಚೊಚ್ಚಲ ಆವೃತ್ತಿಯ ಎಲ್‌ಪಿಎಲ್ ಟೂರ್ನಿಯನ್ನು ಈ ಹಿಂದೆ ಮುಂದೂಡಲಾಗಿತ್ತು. ಅಫ್ರಿದಿ ಅವರನ್ನು ಶನಿವಾರ ಗ್ಯಾಲೆ ತಂಡದ ನಾಯಕರಾಗಿ ನೇಮಕ ಮಾಡಲಾಗಿದೆ. ಈ ತಂಡವನ್ನು ಪಾಕಿಸ್ತಾನದ ಉದ್ಯಮಿ ನದೀಮ್ ಒಮರ್ ಖರೀದಿಸಿದ್ದರು. ನದೀಮ್ ಅವರು ಪಾಕಿಸ್ತಾನ ಪ್ರೀಮಿಯರ್ ಲೀಗ್‌ನ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಮಾಲಿಕರಾಗಿದ್ದಾರೆ.

  ಆರಂಭದಲ್ಲಿ ಒಮರ್ ಅವರು ಸರ್ಫರಾಝ್ ಅಹ್ಮದ್‌ರನ್ನು ಗ್ಯಾಲೆ ತಂಡದ ನಾಯಕರಾಗಿ ನೇಮಕ ಮಾಡಿದ್ದರು. ಆದರೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸರ್ಫರಾಝ್ ಅವರು ನ್ಯೂಝಿಲ್ಯಾಂಡ್ ಪ್ರವಾಸ ಸರಣಿಗೆ ಪಾಕಿಸ್ತಾನ ತಂಡಕ್ಕೆ ಆಯ್ಕೆಯಾಗಿರುವ ಕಾರಣದಿಂದಾಗಿ ಗ್ಯಾಲೆ ತಂಡದ ನಾಯಕತ್ವವನ್ನು ಬದಲಾವಣೆ ಮಾಡಬೇಕಾಯಿತು.

 ‘‘ ಅಫ್ರಿದಿ ನಮ್ಮ ತಂಡದ ಹಿರಿಯ ಆಟಗಾರ ಮತ್ತು ನಾಯಕತ್ವದ ಅನುಭವವನ್ನು ಹೊಂದಿರುವುದರಿಂದ ಈಗ ಗ್ಯಾಲೆ ಗ್ಲಾಡಿಯೇಟರ್ಸ್ ತಂಡದ ನಾಯಕನಾಗಿರುತ್ತಾರೆ ’’ಎಂದು ನದೀಮ್ ಒಮರ್ ಹೇಳಿದ್ದಾರೆ ಕ್ರಿಸ್ ಗೇಲ್, ಎಫ್ ಡಿ ಪ್ಲ್ಲೆಸಿಸ್, ಲಿಯಾಮ್ ಪ್ಲಂಕೆಟ್, ಡೇವಿಡ್ ಮಲನ್, ಲಸಿತ್ ಮಾಲಿಂಗ, ಕಮ್ರಾನ್ ಅಕ್ಮಲ್, ವಹಾಬ್ ರಿಯಾಝ್, ಮುಹಮ್ಮದ್ ಹಫೀಝ್ ಮತ್ತಿತರ ಹಲವಾರು ಪ್ರಮುಖ ಅಂತರ್‌ರಾಷ್ಟ್ರೀಯ ಆಟಗಾರರು ಎಲ್‌ಪಿಎಲ್‌ನಲ್ಲಿದ್ದರೂ ಅವರೆಲ್ಲ ಒಂದಲ್ಲ ಒಂದು ಕಾರಣದಿಂದಾಗಿ ತೊಂದರೆಗೆ ಸಿಲುಕಿ ಇದೀಗ ದೂರವಾಗಿದ್ದಾರೆ. ಸರ್ಫರಾಝ್ ಈವೆಂಟ್‌ನಿಂದ ಹಿಂದೆ ಸರಿದಿದ್ದಾರೆ.

 ಭುಜಕ್ಕೆ ಆಗಿರುವ ಗಾಯದಿಂದಾಗಿ ಪಾಕಿಸ್ತಾನದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಕಮ್ರಾನ್ ಅಕ್ಮಲ್ ಕೂಡ ಲೀಗ್‌ನಿಂದ ಹೊರಗುಳಿದಿದ್ದಾರೆ.

 ಪಾಕಿಸ್ತಾನದ ಆಟಗಾರರಾದ ಸೊಹೈಲ್ ತನ್ವೀರ್, ಮುಹಮ್ಮದ್ ಆಮಿರ್, ಎಹ್ಸಾನ್ ಅಲಿ, ಅಝಮ್ ಖಾನ್, ಉಸ್ಮಾನ್ ಶಿನ್ವಾರಿ ಮತ್ತು ಶುಐಬ್ ಮಲಿಕ್ ಎಲ್‌ಪಿಎಲ್‌ನಲ್ಲಿ ಆಡಲಿದ್ದಾರೆ.

 ಎಡಗೈ ವೇಗಿ ತನ್ವೀರ್ ಮತ್ತು ಕೆನಡ ಬ್ಯಾಟ್ಸ್‌ಮನ್ ರವೀಂದರ್‌ಪಾಲ್ ಸಿಂಗ್ ಅವರು ಕೊಲಂಬೊ ತಲುಪಿದ ಕೂಡಲೇ ಕೋವಿಡ್ -19 ಪಾಸಿಟಿವ್ ಪರೀಕ್ಷೆ ನಡೆಸಿದ್ದರು.

 ಉದ್ಘಾಟನಾ ಎಲ್‌ಪಿಎಲ್ ಟ್ರೋಫಿಗಾಗಿ ಜಾಫ್ನಾ ಸ್ಟಾಲಿಯನ್ಸ್, ಕ್ಯಾಂಡಿ ಟಸ್ಕರ್ಸ್, ಗ್ಯಾಲೆ ಗ್ಲಾಡಿಯೇ ಟರ್ಸ್, ಕೊಲಂಬೊ ಕಿಂಗ್ಸ್ ಮತ್ತು ಡಂಬುಲಾ ಹಾಕ್ಸ್ ತಂಡಗಳು ಹಣಾಹಣಿ ನಡೆಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News