ನನ್ನ ಹೀರೊ ಇನ್ನಿಲ್ಲ: ಫುಟ್ಬಾಲ್ ದಂತಕಥೆಗೆ ದಿಗ್ಗಜರ ನುಡಿನಮನ

Update: 2020-11-26 18:52 GMT

ಹೊಸದಿಲ್ಲಿ, ನ.26 ಅರ್ಜೆಂಟೀನಾದಲ್ಲಿ ಬುಧವಾರ ನಿಧನರಾದ ಫುಟ್ಬಾಲ್ ದಂತಕಥೆ ಡಿಗೊ ಮರಡೋನಾ ಅವರಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಭಾವುಕ ನುಡಿನಮನ ಸಲ್ಲಿಸಿದ್ದಾರೆ.

"ನನ್ನ ಹೀರೊ ಇನ್ನಿಲ್ಲ...ನನ್ನ ಹುಚ್ಚು ಪ್ರತಿಭಾವಂತನಿಗೆ ಚಿರಶಾಂತಿ..ನಾನು ನಿಮ್ಮ ಫುಟ್ಬಾಲ್ ವೀಕ್ಷಿಸಿದ್ದೇನೆ" ಎಂದು ಗಂಗೂಲಿ ಟ್ವೀಟ್ ಮಾಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಮೆದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮರಡೋನಾ ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದರು. ಅರ್ಜೆಂಟೀನಾಗೆ ವಿಶ್ವಕಪ್ ಗೆದ್ದುಕೊಟ್ಟ ತಂಡದ ನಾಯಕರಾಗಿದ್ದ ಅವರು, ಫುಟ್ಬಾಲ್ ನ ಸರ್ವಶ್ರೇಷ್ಠ ಆಟಗಾರ ಎನಿಸಿಕೊಂಡಿದ್ದರು.

ಕ್ರಿಕೆಟ್ ದಂತಕಥೆ ಎನಿಸಿರುವ ಸಚಿನ್ ತೆಂಡೂಲ್ಕರ್ ಕೂಡಾ ಮರಡೋನಾ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. "ಫುಟ್ಬಾಲ್ ಮತ್ತು ಕ್ರೀಡಾಜಗತ್ತು ಸರ್ವಶ್ರೇಷ್ಠ ಆಟಗಾರರನ್ನು ಕಳೆದುಕೊಂಡಿದೆ. ಚಿರಶಾಂತಿ ಸಿಗಲಿ ಮರಡೋನಾ! ನಿಮ್ಮನ್ನು ನಾವು ಕಳೆದುಕೊಂಡಿದ್ದೇವೆ" ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.

ಯುವರಾಜ್ ಸಿಂಗ್, ಮುಹಮ್ಮದ್ ಕೈಫ್, ಸೂರ್ಯಕುಮಾರ್ ಯಾದವ್ ಮತ್ತಿತರ ಕ್ರಿಕೆಟಿಗರು ಮರಡೋನಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಿಂದ "ಇಟ್ ವಾಸ್ ದ ಹ್ಯಾಂಡ್ ಆಫ್ ಗಾಡ್ ವನ್ಸ್ ಅಗೈನ್, ದಿಸ್ ಟೈಮ್ ಫಾರೆವರ್. ದ ಲೆಜೆಂಡ್ ಶಲ್ ಲಿವ್ ಆನ್" ಎಂದು ಟ್ವೀಟ್ ಮಾಡಲಾಗಿದೆ. ಇತರ ಎಲ್ಲ ಐಪಿಎಲ್ ತಂಡಗಳು ಕೂಡಾ ಮರಡೋನಾ ಸಾಧನೆಯ ಮೆಲುಕು ಹಾಕಿವೆ.

2000ನೇ ಇಸವಿಯಲ್ಲಿ ಫಿಫಾ ನಡೆಸಿದ ’ಪ್ಲೇಯರ್ ಆಫ್ ದ ಸೆಂಚುರಿ’ ಆನ್‌ಲೈನ್ ಸಮೀಕ್ಷೆಯಲ್ಲಿ ಮರಡೋನಾ ಶೇಕಡ 54ರಷ್ಟು ಹಾಗೂ ಪೀಲೆ ಶೇಕಡ 18ರಷ್ಟು ಮತ ಪಡೆದಿದ್ದರು. ಇವರನ್ನು ಫಿಫಾ ಜಂಟಿ ವಿಜೇತರೆಂದು ಘೋಷಿಸಿತ್ತು.

ದಾಖಲೆಗಳು

ಅರ್ಜೆಂಟೀನಾದ ಪ್ರಮುಖ ಫುಟ್ಬಾಲ್ ಆಟಗಾರ ತನ್ನ ಇಡೀ ವೃತ್ತಿಜೀವನದಲ್ಲಿ 345 ಗೋಲುಗಳನ್ನು ಗಳಿಸಿದ್ದಾನೆ. 21 ವಿಶ್ವಕಪ್ ಪಂದ್ಯಗಳಲ್ಲಿ 8 ಅಸಿಸ್ಟ್‌ಗಳನ್ನು ನೀಡಿದ್ದಾರೆ. ಮರಡೋನ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನದಿಂದ ಅತಿ ಹೆಚ್ಚು ಗೋಲು ಗಳಿಸಿದ ಎರಡನೇ ಆಟಗಾರ.

 ಮರಡೋನ 1997ರಲ್ಲಿ ವೃತ್ತಿಪರ ಫುಟ್ಬಾಲ್‌ನಿಂದ ನಿವೃತ್ತರಾದರು. 2000 ರಲ್ಲಿ ಮರಡೋನ ಫಿಫಾ ಶತಮಾನದ ಪ್ರಶಸ್ತಿಯನ್ನು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News