ದೇಶದಲ್ಲಿ ಕಳವಳಕಾರಿ ಪ್ರಮಾಣಕ್ಕೇರಿದ ವಿತ್ತೀಯ ಕೊರತೆ

Update: 2020-11-28 03:38 GMT

ಹೊಸದಿಲ್ಲಿ, ನ.28: ಕೇಂದ್ರದ ವಿತ್ತೀಯ ಕೊರತೆ ಪ್ರಮಾಣ ಅಕ್ಟೋಬರ್ ಕೊನೆಯ ವೇಳೆಗೆ 9.5 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿದ್ದು, ಇದು ವಾರ್ಷಿಕ ಗುರಿಯ ಶೇಕಡ 120ರಷ್ಟಾಗಿದೆ. ಆದಾಯ ಸಂಗ್ರಹದಲ್ಲಿ ಭಾರಿ ಕೊರತೆ ಕಂಡುಬಂದಿದ್ದು, ವೆಚ್ಚವನ್ನು ನಿಭಾಯಿಸಲು ಇದು ಸಾಕಾಗುತ್ತಿಲ್ಲ ಎಂದು ಅಂಕಿಅಂಶಗಳಿಂದ ತಿಳಿದುಬರುತ್ತಿದೆ.

ಅಕ್ಟೋಬರ್ ಕೊನೆಯ ಬಳಿಕ ಕಂದಾಯ ಸ್ವೀಕೃತಿ ವಾರ್ಷಿಕ ಗುರಿಯ ಶೇಕಡ 34ರಷ್ಟು ಇದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ಇದು ಶೇಕಡ 46ರಷ್ಟಾಗಿತ್ತು. 2020-21ರ ವಾರ್ಷಿಕ ಅಂದಾಜು ವೆಚ್ಚದ ಶೇಕಡ 55ರಷ್ಟು ವೆಚ್ಚ ಈಗಾಗಲೇ ಆಗಿದೆ. ಕಳೆದ ವರ್ಷ ಈ ವೇಳೆಗೆ ಈ ಪ್ರಮಾಣ 59% ಆಗಿತ್ತು.

ಸರ್ಕಾರ ಒತ್ತು ನೀಡಿದ ಹೊರತಾಗಿಯೂ ಬಂಡವಾಳ ವೆಚ್ಚ ವಾರ್ಷಿಕ ಸರಾಸರಿಯ ಶೇಕಡ 48ರಷ್ಟು ಮಾತ್ರ ಇದೆ. ಕಳೆದ ವರ್ಷದ ಎಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಇದು 60% ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News