ಕೊರೋನ : ಚೇತರಿಕೆ ಪ್ರಮಾಣ 93.68% ಶೇ.ಕ್ಕೆ ಏರಿಕೆ

Update: 2020-11-28 13:10 GMT

ಹೊಸದಿಲ್ಲಿ, ನ.28: ದೇಶದಲ್ಲಿ ಶನಿವಾರ ಬೆಳಗ್ಗಿನವರೆಗಿನ ಅಂಕಿಅಂಶದ ಪ್ರಕಾರ , ಕಳೆದ 24 ಗಂಟೆಯಲ್ಲಿ 41,322 ಹೊಸ ಕೊರೋನ ಸೋಂಕು ಪ್ರಕರಣ ದಾಖಲಾಗಿದ್ದು ಸೋಂಕಿತರ ಸಂಖ್ಯೆ 93,51,109ಕ್ಕೇರಿದೆ. ಒಟ್ಟು 87,59,969 ಮಂದಿ ಚೇತರಿಸಿದ್ದು ಚೇತರಿಕೆ ಪ್ರಮಾಣ 93.68ಶೇ.ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಶನಿವಾರ ಮಾಹಿತಿ ನೀಡಿದೆ. 

1,36,200 ಮಂದಿ ಸೋಂಕಿನಿಂದ ಮೃತಪಟ್ಟಿದ್ದು , ಮೃತಪಟ್ಟವರಲ್ಲಿ 70ಶೇ.ದಷ್ಟು ಮಂದಿ ಬಹುರೋಗದಿಂದ ಬಳಲುತ್ತಿದ್ದರು. ಸಕ್ರಿಯ ಪ್ರಮಾಣ 4,54,940ಕ್ಕೆ ಸೀಮಿತವಾಗಿದ್ದು ಇದು ಒಟ್ಟು ಪ್ರಕರಣಗಳ 4.87ಶೇ.ದಷ್ಟಾಗಿದೆ. ಶನಿವಾರದವರೆಗಿನ 24 ಗಂಟೆಯ ಅವಧಿಯಲ್ಲಿ 485 ಹೊಸ ಸಾವಿನ ಪ್ರಕರಣ ವರದಿಯಾಗಿದ್ದು ಇದರಲ್ಲಿ ದಿಲ್ಲಿ- 98, ಮಹಾರಾಷ್ಟ್ರ-85, ಪಶ್ಚಿಮಬಂಗಾಳ-46, ಹರ್ಯಾಣ-29, ಪಂಜಾಬ್-27 ಉತ್ತರಪ್ರದೇಶ ಮತ್ತು ಕೇರಳ- ತಲಾ 23 ಸಾವು ಸಂಭವಿಸಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ನವೆಂಬರ್ 27ರವರೆಗೆ ಒಟ್ಟು 11,57,605 ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗಿದೆ ಎಂದು ಇಲಾಖೆ ಹೇಳಿದೆ. ಕೊರೋನ ಸೋಂಕಿನಿಂದ ಮಹಾರಾಷ್ಟ್ರದಲ್ಲಿ ಅತ್ಯಧಿಕ (46,898) ಮಂದಿ ಮೃತಪಟ್ಟಿದ್ದರೆ ನಂತರದ ಸ್ಥಾನಗಳಲ್ಲಿ ಕರ್ನಾಟಕ(11,738), ತಮಿಳುನಾಡು(11,681), ದಿಲ್ಲಿ (8,909) ಪಶ್ಚಿಮ ಬಂಗಾಳ(8,270) ರಾಜ್ಯಗಳಿವೆ ಎಂದು ಇಲಾಖೆಯ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News