ಅಮೆರಿಕ ವ್ಯವಸ್ಥಾಪನೆ- ಬಜೆಟ್ ಕಚೇರಿ ನಿರ್ದೇಶಕಿಯಾಗಿ ನೀರಾ ಟಂಡನ್ ?

Update: 2020-11-30 03:59 GMT

ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡನ್ ಅವರು ಅಮೆರಿಕದ ವ್ಯವಸ್ಥಾಪನೆ ಮತ್ತು ಬಜೆಟ್ ಕಚೇರಿಯ ನಿರ್ದೇಶಕರಾಗಿ ಭಾರತೀಯ ಮೂಲದ ಅಮೆರಿಕನ್ ಮಹಿಳೆ, ಸೆಂಟರ್ ಫಾರ್ ಅಮೆರಿಕನ್ ಪ್ರೋಗ್ರೆಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀರಾ ಟಂಡನ್ ಅವರನ್ನು ನೇಮಕ ಮಾಡಲು ನಿರ್ಧರಿಸಿದ್ದಾರೆ.

ಅಂತೆಯೇ ಸಿಸಿಲಿಯಾ ರೋಸ್ ಅವರನ್ನು ಆರ್ಥಿಕ ಸಲಹೆಗಾರರ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಿದ್ದಾರೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಒಬಾಮಾ ಆಡಳಿದಲ್ಲಿ ಅಧಿಕಾರದಲ್ಲಿ ಹಿರಿಯ ಅಂತರ್ ರಾಷ್ಟ್ರೀಯ ಆರ್ಥಿಕ ಸಲಹೆಗಾರರಾಗಿದ್ದ ವಲ್ಲಿ ಅಡೆಯೆಮೊ ಅವರನ್ನು ಜನೆಟ್ ಯೆಲ್ಲೆನ್‌ನ ಅತ್ಯುನ್ನತ ಸಹಾಯಕರನ್ನಾಗಿ ಖಜಾನೆ ವಿಭಾಗಕ್ಕೆ ನೇಮಕ ಮಾಡಲಿದ್ದಾರೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಅರ್ಥಶಾಸ್ತ್ರಜ್ಞರಾದ ಜೆರೆಡ್ ಬ್ರೆನ್‌ಸ್ಟೀನ್ ಮತ್ತು ಹೀತರ್ ಬೌಶೆ ಅವರನ್ನು ಆರ್ಥಿಕ ಸಲಹೆಗಾರರ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಹಿಂದೆ ಬರಾಕ್ ಒಬಾಮಾ ಆಡಳಿತದಲ್ಲಿ ಟಂಡನ್ ಆರೋಗ್ಯ ಕ್ಷೇತ್ರದ ಸಲಹೆಗಾರರಾಗಿದ್ದರು. 2016ರಲ್ಲಿ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಅಧ್ಯಕ್ಷೀಯ ಪ್ರಚಾರದಲ್ಲಿ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News